ಕೇಜಿ ರಂಜನೆ ಕ್ರೇಜಿ ವಂದನೆ!

  • IndiaGlitz, [Friday,February 14 2014]

ಜೋತಿಷ್ಯವನ್ನು ನಂಬದೆ ಇರುವವರೆಲ್ಲ ನಂಬುವಂತ ಕಾಲ ಬಂದಿದೆ. ತಾನಾಯಿತು ತನ್ನ ಕೆಲಸವಾಯಿತು ಎಂದು ಶ್ರದ್ದೆ ನಂಬಿದ ವೃತಿಯನ್ನೇ ಪಾಲಿಸಿಕೊಂಡು ಬಂದ ಕನ್ನಡ ಸಿನೆಮಾದ ಕನಸುಗಾರ ವಿ. ರವಿಚಂದ್ರನ್ ಹೆಸರನ್ನು ‘ರವಿಚಂದರನ್’ ಆಗಿಬದಳಿಸಿಕೊಳ್ಳುವುದೇ ಅಲ್ಲದೆ, ಆಂಗ್ಲ ಭಾಷೆಯಲ್ಲಿ ಅವರ ಶೀರ್ಷಿಕೆಗೆ ಇರಬೇಕಾದ್ದ ‘ಸಿ’ ಬದಲಿಗೆ ‘ಕೆ’ ಸೇರಿಸಿ ಸಮೂಹದ ಜೊತೆ ಸಾಗಿದ್ದಾರೆ.

ಕನ್ನಡದಲ್ಲಿ ಪ್ರೀತಿಗೆ ತೆರೆಯಮೇಲೆ ಒಡೆಯ, ಸಮೃದ್ದ ಶ್ರೀಮಂತಿಕೆಯ ಸರದಾರ, ಸ್ಟೈಲ್ ಅಂದರೆ ರವಿಚಂದ್ರನ್ ಅವರು ‘ಕ್ರಜೀ ಸ್ಟಾರ್’ ಸಿನೆಮಾದಲ್ಲಿ ಅದನ್ನೆಲ್ಲಾ ಏನೋ ಮುಂದುವರಿಸಿದ್ದಾರೆ. ಆದರೆ ಮೊದಲ ಹಾಫ್ ಅಲ್ಲಿ ‘ಮಂಜಿನ ಹನಿ’ ಸಿನೆಮಾ ಬಗ್ಗೆ ಪ್ರಸ್ಥಾಪಿಸಿ ಎರಡನೆಯ ಭಾಗದಲ್ಲಿ ಇಡೀ ಚಿತ್ರಮಂದಿರದಲ್ಲಿ ಪ್ರೇಕ್ಷಕ ಅಲುಗಾಡದಂತೆ ಮಾಡಿಬಿಡುತ್ತಾರೆ. ಸಿನೆಮಾದ ಜೀವಾಳ ಸೆಕಂಡ್ ಹಾಫ್ ಎಂದರೆ ತಪ್ಪಾಗಲಾರದು.

ಮಲಯಾಳಂ ಸಿನೆಮಾದ ‘ಟ್ರಾಫಿಕ್’ ಸಿನೆಮಾದ ಹೃದಯ ಕಸಿ ವಿಷಯ ಬಿಟ್ಟರೆ ಉಳಿದಿದ್ದೆಲ್ಲಾ ರವಿಮಯ. ‘ಕ್ರಜೀ ಸ್ಟಾರ್’ ಸಿನೆಮಾದಲ್ಲಿ ತುಂಬಿರುವ ನಟ ವರ್ಗವನ್ನು ಗಮನಿಸಿದರೆ ಇಷ್ಟೊಂದು ನಟರುಗಳನ್ನು ಒಟ್ಟುಗೂಡಿಸಿ ಸಿನೆಮಾ ಮಾಡುವುದು ಅವರ ಮೇಲಿನ ಗೌರವದಿಂದ ಸಾಧ್ಯವಾಗಿದೆ.

ಪುತ್ರ ವಿಕ್ರಮ್ ಅವರನ್ನು ಸೂರ್ಯನ್ ಆಗಿ ಈ ಸಿನೆಮಾದಲ್ಲಿ ಪರಿಚಯಿಸಿ,‘ಯುವ’ ಪಾತ್ರದ ಮುಖೇನ ಮಿಂಚಿನ ಸಂಚಾರದಲ್ಲಿ ಬಳಸಿಕೊಂಡಿದ್ದಾರೆ. ಪುತ್ರ ಕ್ರೇಜಿ ಸ್ಟಾರ್ ಆರಾಧ್ಯ ದೈವ ಆಗಿದ್ದಾರೆ. ಪ್ರಕಾಷ್ ರಾಜ್, ರಮೇಶ್ ಅರವಿಂದ್, ಪ್ರಿಯಾಂಕ ಉಪೇಂದ್ರ, ಅವಿನಾಶ್, ನೀತು, ಭಾವನಾ, ದಿಲೀಪ್ ರಾಜ್, ಅಕುಲ್ ಬಾಲಾಜಿ, ಕಾದಲ್ ಸಂಧ್ಯ, ರಂಗಾಯಣ ರಘು, ನವೀನ್ ಕೃಷ್ಣ, ವೀಣ ಸುಂದರ್, ಧರ್ಮ, ಸಂಗೀತ, ಯೆತಿರಾಜ್, ರಘುರಾಮ್, ಶೋಬಾರಾಜ್, ರವಿಶಂಕರ್, ವಾಣಿಶ್ರೀ, ಸಂಗೀತ, ರಾಮ್, ಮನದೀಪ್ ರಾಯ್, ಡಿಂಗ್ರಿ ನಾಗರಾಜ್ ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.

147 ನಿಮಿಷದ ಸಿನೆಮಾ ಮನಸ್ಸುಗಳನ್ನು ಸ್ವಿಚ್