ಕೋತಿರಾಜನ ಕಥೆ ಈಗ ಸಿನೆಮಾ

  • IndiaGlitz, [Tuesday,January 21 2014]

ಸಾಮಾನ್ಯ ಜನರ ಮಧ್ಯೆ ಇರುವಂತಹ ಅಸಾಮಾನ್ಯ ಪ್ರತಿಭೆಗಳು ಎಂದು ಹಲವರನ್ನು ನಾವು ಗುರ್ತಿಸಬಹುದು. ಅಂತಹ ಅಸಮಾನ್ಯ ಶಕ್ತಿ ಹೊಂದಿರುವ ವ್ಯಕ್ತಿಯೊಬ್ಬನ ಕಥೆಯನ್ನಾಧರಿಸಿ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಕೋತಿರಾಮ ಎಂದೇ ಹೆಸರಾದ ಚಿತ್ರದುರ್ಗದ ಕೋತಿರಾಜ ವಾಲ್ಕ್ಲೈಂಬಿಂಗ್ನಲ್ಲಿ ಜಗದ್ವಿಖ್ಯಾತಿ ಗಳಿಸಿದ್ದಾರೆ. ಅವರ ಸಾಹಸದ ಜೀವನ ಕುರಿತಾಗಿ ಚಿತ್ರವೊಂದನ್ನು ವಿ.ಜಿ.ಫಿಲಂಸ್ ಲಾಂಛನದಲ್ಲಿ ಶ್ರೀಮತಿ ಶೈಲಾಡೇವಿಡ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇದೇ ತಿಂಗಳ ೨೩ ರಿಂದ ಪ್ರಾರಂಭವಾಗಲಿದೆ.

ಈ ಕೋತಿರಾಜನ ಜೀವನದಲ್ಲಿ ನಡೆದಂತಹ ಕೆಲ ನೈಜಘಟನೆಗಳನ್ನು ಬಳಸಿಕೊಂಡು ಸಿನಿಮ್ಯಾಟಿಕ್ ಆಗಿ ಜೋತಿ ಅಲಿಯಾಸ್ ಕೋತಿರಾಜ ಎಂಬ ಹೆಸರಿನಿಂದ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವವರು ಸೆಬಾಸ್ಟಿನ್ ಡೇವಿಡ್ ಅವರು. ಈ ಚಿತ್ರದಲ್ಲಿ ಫ್ರೀ ರನ್ನರž್ಸ್ ವಿಭಾಗದಲ್ಲಿ ಖ್ಯಾತರಾದ ಚಹಾಣ್ ತಂಡದವರ ಸಾಹಸ ಕೂಡ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುವುದು.

ಚಿತ್ರಕ್ಕೆ ಮೋಹನ್ ಛಾಯಾಗ್ರಹಣ, ಸೆವೆನ್ಸ್ಟಾರ್ ಭಾಸ್ಕರ್ ಸಂಗೀತ, ನಾಗೇಶ್.ಎನ್ ಸಂಭಾಷಣೆ ಮತ್ತು ಸಹ ನಿರ್ದೇಶನ,ಡಾ ದೊಡ್ಡರಂಗೇಗೌಡ, ಶ್ರೀಚಂದ್ರ,ನಾಗೇಶ್ ಸಾಹಿತ್ಯ, ಸ್ವಾಮಿ ಸಂಕಲನ, ಕುಂಗ್ಫೂ ಬಾಬು ಸಾಹಸ, ತ್ರಿಭುವನ್, ಚಾಮರಾಜ್ ನೃತ್ಯನಿರ್ದೇಶನ, ಜಿ.ಮೂರ್ತಿ ಕಲಾನಿರ್ದೇಶನವಿದೆ. ಜ್ಯೋತಿರಾಜ್ (ಕೋತಿರಾಜ್),ಐಶಾನಿ, ದೀಪಿಕದಾಸ್, ರಮೇಶ್ ಭಟ್, ಸಂಕೇತ್ ಕಾಶಿ, ಲಕ್ಷ್ಮೀಚಂದ್ರಶೇಖರ್, ಜಯಲಕ್ಷ್ಮೀ, ಶೋಭಲೋಲನಾಥ್ ತಾರಾಬಳಗದಲ್ಲಿದ್ದಾರೆ.

More News

ಫೆಬ್ರವರಿಯಲ್ಲಿ ‘ಕ್ವಾಟ್ಲೆ

ಸ್ಯಾಂಡಲ್ವುಡ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕ್ವಾಟ್ಲೆ ಚಿತ&

ಕುಮುಟಾದಲ್ಲಿ ಸವಾರಿ ೨

ಜೇಕಬ್ ಫಿಲಂಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ-ನಿರ್ಮಾಣದ ಜೊತೆಗೆ ನಿರ್ದೇಶನ ಮಾ

'హార్ట్ఎటాక్'డబ్బింగ్ పూర్తి

పూరిజగన్నాథ్ టూరింగ్ టాకీస్ బ్యానర్ లో రూపొందుతున్న చిత్రం ‘హార్

Checkout Randeep Hooda's looks in 'Main aur Charles'

Earlier news had been abuzz about Pooja Bhatt's forthcoming thriller 'Bad', starring Randeep Hooda in lead. Latest development on movie's front is that the makers have changed the title of the project. The film will be now called 'Main Aur Charles' instead of 'Bad'.

Ambi Line of Control - Sudeep

It is like ‘Lakshmana Rekhe’ – the line drawn by Dr Ambarish will not be crossed. I would go by the order of our senior. Our seniors also followed ruling of their seniors. Whatever instruction given by Dr Ambarish would be followed strictly says Kichcha Sudeep answering a question on the participation of Kannada filmdom Bundh on 27th of this month.....