ಗಟಗಟ ಹಾಡಿದ ಪ್ರೇಮ್

  • IndiaGlitz, [Tuesday,August 05 2014]

ಒಂದು ಕಿಕ್ ನೀಡುವ ಹಾಡು ಗಟಗಟ....ಈ ಹಾಡನ್ನು ನಿರ್ದೇಶಕ ಹಾಗೂ ನಟ ಉಪೇಂದ್ರ ಅವರ ಧ್ವನಿಯಲ್ಲೇ ಹಾಡಿಸಬೇಕು ಎಂದು ಲವ್ ಆನ್ ಎನ್ ಎಚ್ 4 ಚಿತ್ರದ ನಿರ್ದೇಶಕ ಅವರ ಆಸೆ. ಆದರೆ ಉಪೇಂದ್ರ ಅವರು ಬಂದು ಹಾಡುವುದಕ್ಕೂ ಮುಂಚೆ ಈ ಹಾಡನ್ನು ನಿರ್ದೇಶಕ ಪ್ರೇಮ್ ಆಕಸ್ಮಿಕವಾಗಿ ಕೇಳಿದ ಪರಿಣಾಮ ಈ ಹಾಡನ್ನು ಪ್ರೇಮ್ ಅವರೇ ಹಾಡಲು ಇಚ್ಚಿಸಿದ್ದರಿಂದ ಹಾಡಿದ್ದಾರೆ.

ಗಟಗಟ....ಹಾಡು ಎರಡು ಧ್ವನಿ ಬದಲಾವಣೆ ಅಲ್ಲಿ ಬರುವ ಹಾಡು ಅದನ್ನು ನಿರ್ದೇಶಕ ಪ್ರೇಮ್ ಅವರು ಹೆಚ್ಚು ಆಯಾಸವಿಲ್ಲದೆ ಹಾಡಿರುವರು. ಮೊದಲ ಧ್ವನಿ ಕಿಕ್ ಅಂದರೆ ಎಣ್ಣೆ ಹಾಕುವಾಗ ಸರಿಹೋಗುವ ಸಾಲುಗಳು ಇನ್ನೊಂದು ರೊಮ್ಯಾಂಟಿಕ್ ಸಾಲುಗಳು. ಲವ್ ಆನ್ ಎನ್ ಎಚ್ 4 ಚಿತ್ರದಲ್ಲಿ ಕುಡಿದ ಅಮಲಿನ ಹಾಡು ನಾಯಕ ಅಕುಲ್ ಅವರಿಗೆ, ನಾಯಕ ತಿಲಕ್ ಅವರಿಗೆ ಹೆಣ್ಣಿನ ಜೊತೆ ಅಮಲು ಬರಿಸುವ ಹಾಡು.

ಇದಷ್ಟೇ ಅಲ್ಲದೆ ಜೋಗಿ ಪ್ರೇಮ್ ಅವರು ಹಾಡಿದ ಖುಷಿಯಲ್ಲಿ ನಿರ್ದೇಶಕರಿಗೆ ಸಾವಿರದ ಒಂದು ರೂಪಾಯಿ ನೀಡಿ ಶಭಾಷ್ ಎಂದಿದ್ದಾರೆ. ಪತ್ರಕರ್ತರಾದವರು ನಿರ್ದೇಶಕ ಆದರೆ ಎಂತಹ ಗುಣಗಾನ ಅದು ಗಾನದಲ್ಲಿ ಸಿಕ್ಕಿದೆ ಎಂಬುದಕ್ಕೆ ಒಂದು ಪ್ರೀತಿಯ ನಿದರ್ಶನಕ್ಕೆ ಪ್ರೇಮ್ ನಾಂದಿ ಆಗಿದ್ದಾರೆ.

ಜೋಗಿ ಪ್ರೇಮ್ ಅವರು ಹಾಡಿರುವ ಹಾಡು ಎಷ್ಟು ಚಿತ್ರತಂಡಲ್ಲಿ ಜನಪ್ರಿಯತೆ ಆಗಿದೆ ಅಂದರೆ ಅವರೆಲ್ಲ ಮೊಬೈಲ್ ಫೋನ್ ಅಲ್ಲಿ ಈ ಹಾಡಿನ ಕಾಲರ್ ಟ್ಯೂನ್ ಬಂದು ಕುಳಿತಿದೆ.