ಗಣಪ ಪ್ರತಿ ಸಿದ್ದ

  • IndiaGlitz, [Tuesday,October 07 2014]

ಪಿ 2 ಎಂಟರ್ಟೈನ್ಮೆಂಟ್ ಅಡಿಯಲ್ಲಿ ಪ್ರೇಮ್ ಹಾಗೂ ಪರಮೇಶ್ ಅವರು ನಿರ್ಮಿಸಿರುವ ಚಿತ್ರ ಗಣಪ ಚಿತ್ರಕ್ಕೆ 112 ದಿವಸಗಳ ಚಿತ್ರೀಕರಣ ಚೆನ್ನೈ,ಬೆಂಗಳೂರು,ಮುಂಬೈ,ಮದುರೈ,ಕಾರೈಕುಡಿ ಸ್ಥಳಗಳಲ್ಲಿ ಪ್ರಭು ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ನಡೆಸಲಾಗಿದ್ದು ಆನಂತರ ಚಿತ್ರೆತರ ಚಟುವಟಿಕೆಗಳನ್ನು ಪೂರೈಸಿಕೊಂಡು ಇದೀಗ ಮೊದಲ ಪ್ರತಿಯನ್ನು ಹೊರತಂದಿದೆ.

ಅಂಧರಿಗೆ ಗಡಿಯಾರವನ್ನು ನೀಡುವ ಪ್ರಶಂಸನಿಯ ವಿಚಾರದಿಂದ ಗಣಪ ಚಿತ್ರದ ಧ್ವನಿ ಸುರುಳಿ ಅನ್ನು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಿ ಆನಂದ್ ಆಡಿಯೋ ಹೊರತಂದಿರುವ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರಕಿಸಿಕೊಂಡಿರುವ ಗಣಪ ಸೆನ್ಸಾರ್ ಬಳಿ ಹೋಗಲು ಸಿದ್ದತೆ ಮಾಡಿಕೊಳ್ಳುತ್ತಿದೆ.

ಈ ಚಿತ್ರಕ್ಕಾಗಿ ನಾಯಕ ಸಂತೋಷ್ ಅವರು ವಿಶೇಷ ತರಬೇತಿಯನ್ನು ಮಾಡಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ. ಪ್ರಿಯಾಂಕ ಚಿತ್ರದ ಕಥಾ ನಾಯಕಿ. ನಿರ್ದೇಶಕ ಪ್ರಭು ಶ್ರೀ ನಿವಾಸ್ ಈ ಹಿಂದೆ ಜೀವ ಸಿನೆಮಾ ನಿರ್ದೇಶನ ಮಾಡಿದವರು,ಗಣಪ ಚಿತ್ರಕ್ಕೆ ಅನೇಕ ಹೊಸ ಪ್ರತಿಬೆಗಳನ್ನು ಪರಿಚಯ ಮಾಡಿದ್ದಾರೆ.

ಪೆಟ್ರೋಲ್ ಪ್ರಸನ್ನ ಹಾಗೂ ಸುಚಿತ್ರಾ (ಡಿಸ್ಕೋ ಶಾಂತಿ ಸಹೋದರಿ) ಅವರಿಗೆ ಒಂದು ಹಾಡು ಸಹ ಈ ಚಿತ್ರದಲ್ಲಿ ಇದೆ.

ಕರಣ್ ಬಿ ಕೃಪಾ ಅವರ ಸಂಗೀತ,ಶ್ರೀ ನಿವಾಸ್ ದೇವಸಂ ಅವರ ಛಾಯಾಗ್ರಹಣ,ಜೋನಿ ಹರ್ಷ ಅವರ ಸಂಕಲನ,ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ,ಡಿಫರೆಂಟ್ ಡ್ಯಾನಿ,ಮಾಸ್ ಮಾಧ,ಸ್ಟಂಟ್ ಶಿವ,ಮಹೇಶ್ ಅವರ ಸಾಹಸ,ಜಯಂತ್ ಕಾಯ್ಕಿಣಿ,ಹೃದಯಶಿವ,ಚಿಂಮಯಿ,ಶಿವು ಬೆರಗಿ ಅವರ ಗೀತ ಸಾಹಿತ್ಯ ಚಿತ್ರಕ್ಕೆ ಒದಗಿಸಿದ್ದಾರೆ.