ಜಸ್ಟ್ ಲವ್ ಜಸ್ಟ್ ಬಂದು ನೋಡಿ

  • IndiaGlitz, [Monday,May 12 2014]

ರಾಜಣ್ಣ ಫಿಲಂಸ್ ಅಡಿಯಲ್ಲಿ ಲೇಖ ರಾಜಣ್ಣ ನಿರ್ಮಿಸಿರುವ ‘ಜಸ್ಟ್ ಲವ್’ ಕನ್ನಡ ಸಿನೆಮಾ ‘ಫೀಲ್ ಮಾಡಿ’ ಎಂಬ ಅಡಿ ಬರಹದೊಂದಿಗೆ ಬಿಡುಗಡೆ ಆಗುತ್ತಿದೆ.

ಪುಟ್ಟ ಪರದೆಯಿಂದ ದೊಡ್ಡ ಜನಪ್ರಿಯತೆಯನ್ನು ಪಡೆದು ಕೊಂಡ ಜೆ ಕೆ ‘ಅಶ್ವಿನಿ ನಕ್ಷತ್ರ’ ಖ್ಯಾತಿ ಈ ಚಿತ್ರದಲ್ಲಿ ಒಬ್ಬ ಆರಾಮವಾದ ಆಸಾಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನೇಹಾ ಸಕ್ಸೇನ ಈ ಚಿತ್ರದ ನಾಯಕಿ.ಅಚ್ಯುತ್ ಕುಮಾರ್ ಹಾಗೂ ಸಂಗೀತ ಪೋಷಕ ಪಾತ್ರಗಳಲ್ಲಿ ಇದ್ದಾರೆ.

ಪ್ರೇಮ ಕಥೆ ಅಲ್ಲದೆ ಈ ಚಿತ್ರದಲ್ಲಿ ಹಾಸ್ಯ, ಹಾಡುಗಳು, ಸಾಹಸ ಸಹ ಹದವಾಗಿ ಬೆರಸಲಾಗಿದೆ ಎಂದು ಕಥೆ, ಚಿತ್ರಕಥೆ, ಸಂಕಲನ ನಿರ್ದೇಶನ ಮಾಡಿರುವ ಎಸ್ ನಾಗೇಂದ್ರ ಅರಸ್ ತಿಳಿಸುತ್ತಾರೆ.

ಸತೀಶ್ ಬಾಬು ಅವರ ಸಂಗೀತ, ಅರುಣ್ ಸುರೇಶ್ ಅವರ ಛಾಯಾಗ್ರಹಣ, ನಾಗ ಕೀರ್ತಿ ಅವರ ಸಾಹಸ, ಸಿದ್ದು ಹಿರೇಮಟ್ಟ್ ಅವರ ಸಂಭಾಷಣೆ ಈ ಮೂವರು ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಪರಿಚಯ ಆಗುತ್ತಿದ್ದಾರೆ.