ದಾದಾ ಈಸ್ ಬ್ಯಾಕ್

  • IndiaGlitz, [Wednesday,August 20 2014]

ಗೊಂಬೆಗಳ ಲವ್ ಸಿನೆಮಾದ ಮುಖಾಂತರ ಹೊಸ ರೀತಿಯ ಸಿನೆಮಗಳಿಗೆ ಒಗ್ಗಿಕೊಂಡ ಸಂತೋಷ್ ಈಗ ಮತ್ತೆ ವಾಪಸ್ಸು ಆಗುತ್ತಿದ್ದಾರೆ. ಅವರ ಮೊದಲ ಸಿನೆಮಾ ಖ್ಯಾತಿ ತಂದಿತು ಆದರೆ ಹಣ ಮಾಡಲಿಲ್ಲ.ಸಂತೋಷ್ ಅವರು ತಮಿಳಿನ ಖ್ಯಾತ ನಟ,ನಿರ್ದೇಶಕ ಪಾರ್ಥಿಭನ್ ಕನ್ನಡದಲ್ಲಿ ದಾದಾ ಆಗಿ ಮಾಡುತ್ತಿದ್ದಾರೆ. ಇದೊಂದು ಚಿತ್ರದ ಶೀರ್ಷಿಕೆಯಲ್ಲಿ ಅಡಗಿರುವಂತೆ ಸಾಹಸ ತುಂಬಿದ ಸಿನೆಮಾ ಎಂದು ಹೇಳಬಹುದು.

ಆಪಲ್ ಫ಼ಿಲಂಸ್ ಲಾಂಛನದಲ್ಲಿ ಅಜೇಯ್ ರಾಜ್ ಅರಸ್ ಅವರು ನಿರ್ಮಿಸುತ್ತಿರುವ ದಾದಾ ಈಸ್ ಬ್ಯಾಕ್ ಚಿತ್ರದ ಚಿತ್ರೀಕರಣ ಸೆಪ್ಟಂಬರ್ ನಲ್ಲಿ ಆರಂಭವಾಗಲಿದೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.

ಗೊಂಬೆಗಳ ಲವ್ ಖ್ಯಾತಿಯ ಸಂತೋಷ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಅರುಣ್,ಶ್ರಾವ್ಯ,ಶೃತಿ,ಶರತ್ ಲೋಹಿತಾಶ್ವ,ಅಜೇಯ್ ಮುಂತಾದವರಿದ್ದಾರೆ.

ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅಕ್ಷಯ್.ಪಿ.ರಾವ್ ಅವರ ಸಂಕಲನವಿದೆ. ವಿ.ನಾಗೇಂದ್ರಪ್ರಸಾದ್ ರಚಿಸಿರುವ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಅಲ್ಟಿಮೆಟ್ ಶಿವು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.