ನೀನಾದೆ ನಾ ರೆಡಿ

  • IndiaGlitz, [Thursday,August 07 2014]

ಮೊದಲ ಮಗುವಿನ ಆಗಮನದ ಸಂಭ್ರಮ ಹೇಗೆ ಇರುತ್ತೋ ಹಾಗೆ ಮೊದಲ ಚಿತ್ರದ ಸಂಭ್ರಮ ಇಡೀ ಕುಟುಂಬಕ್ಕೆ ಈಗ. ಸ್ಟಾರ್ ಕಪಲ್ ದೇವರಾಜ್ ಹಾಗೂ ಚಂದ್ರಲೇಖ ಅವರ ಕುಟುಂಬದಿಂದ ಜನಪ್ರಿಯ ನಟ ಪ್ರಜ್ವಲ್ ದೇವರಾಜ್ ಅವರ ಅಭಿನಯದ ಚಿತ್ರ ನಿರ್ಮಾಣ ಬಿಡುಗಡೆ ಹೊಸ್ತಿಲಲ್ಲಿ ತದನಂತರದ ಫಲದ ನಿರೀಕ್ಷೆಯಲ್ಲಿ ಇದ್ದಾರೆ. ದೇವರಾಜ್ ಅವರ ಮತ್ತೊಬ್ಬ ಪುತ್ರ ಪ್ರಣಾಮ್ ಚಿತ್ರದ ಸಕಲ ಕೆಲಸಗಳಲ್ಲೂ ಭಾಗಿ ಆಗಿ ನೀ ನಾದೆ ನಾ ಕುಟುಂಬದ ಪರಿಶ್ರಮದ ಚೊಚ್ಚಲ ಸಿನೆಮಾ ಆಗಿದೆ.

ಡೈನಾಮಿಕ್ ವಿಷನ್ಸ್ ಲಾಂಛನದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅರ್ಪಿಸುವ ಚಂದ್ರದೇವರಾಜ್ ಅವರು ನಿರ್ಮಿಸಿರುವ ನೀನಾದೆ ನಾ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಮಾಸಾಂತ್ಯಕ್ಕೆ ಬಿಡುಗಡೆಯಾಗಲಿದೆ.

ಕಂದಾಸ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ. ಪ್ರಿಯಾಂಕ ಕಂಡ್ವಾಲ್ ಹಾಗೂ ಅಂಕಿತಾಮಹೇಶ್ವರಿ ಈ ಚಿತ್ರದ ನಾಯಕಿಯರು. ಅವಿನಾಶ್,ಬುಲೆಟ್ ಪ್ರಕಾಶ್,ಕೆ.ಎಸ್.ಶ್ರೀಧರ್, ಪವಿತ್ರಲೋಕೇಶ್,ಪನ್ನಗಾಭರಣ,ಯತಿರಾಜ್,ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶ್ರೀನಿವಾಸ್ ರಾಮಯ್ಯರ ಛಾಯಾಗ್ರಹಣವಿದೆ. ಸುರೇಶ್ ಸಂಕಲನ,ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಹಾಗೂ ಕಂದಾಸ್ ಸಂಭಾಷಣೆ ಬರೆದಿದ್ದಾರೆ. ಪ್ರಣಾಮ್ ದೇವರಾಜ್ ಈ ಚಿತ್ರದ ಸಹ ನಿರ್ಮಾಪಕರು.