ಪೆನ್ ಕೊಡುಗೆ

  • IndiaGlitz, [Wednesday,October 15 2014]

ಗೀತೆಗಳನ್ನು ಬರೆಯುವವರಿಗೆ ಏನು ಕೊಡುಗೆ ಕೊಡಬೇಕು. ಸಾದರಣ ಪೆನ್! ಆಹು ಅದು ಅಂತಸ್ತಿಗೆ ಕಡಿಮೆ ಆಯ್ತು ರೀ. ಅದಕ್ಕೆ ಮುದ್ದು ಮನಸೇ ತಂಡ ಖ್ಯಾತ ನಿರ್ದೇಶಕರೂ ಹಾಗೂ ಬರಹಗಾರರು ಆದ ಆರು ವ್ಯಕ್ತಿಗಳಿಗೆ ಒಂದು ಬೆಳ್ಳಿ ಇಂದ ಮಾಡಿಸಿದ ಪೆನ್ ಅನ್ನು ಧ್ವನಿ ಸುರುಳಿ ಬಿಡುಗಡೆ ಸಂಧರ್ಬದಲ್ಲಿ ನೀಡಿ ಸಂತೋಷಗೊಂಡಿದೆ.

ಮುದ್ದು ಮನಸೇ ಚಿತ್ರಕ್ಕೆ ಆರು ನಿರ್ದೇಶಕರುಗಳಾದ ಯೋಗರಾಜ್ ಭಟ್,ಶಷಾಂಕ್,ನಾಗೇಂದ್ರ ಪ್ರಸಾದ್,ಸುನಿ,ಸಂತು,ಎ ಪಿ ಅರ್ಜುನ್ ಅಲ್ಲದೆ ಚಿತ್ರದ ನಿರ್ದೇಶಕ ಅನಂತ್ ಶೈನ್ ಸಹ ತಲಾ ಒಂದೊಂದು ಹಾಡನ್ನು ಬರೆದಿರುವರು.

ಆದರೇ ನಿನ್ನೆ ಸಂಜೆ ಬೆಳ್ಳಿ ಪೆನ್ ಅನ್ನು ಅನಿರೀಕ್ಷಿತವಾಗಿ ಪಡೆಯಲು ಬಂದವರು ಶಷಾಂಕ್,ನಾಗೇಂದ್ರ ಪ್ರಸಾದ್,ಸಂತು,ಸುನಿ ನಿರ್ದೇಶಕರುಗಳು. ನನಗೆ ಬೆಳ್ಳಿ ನೀಡುತ್ತಾರೆ ಅಂತ ಗೊತ್ತಿದ್ದರೆ ನಾನೇ ಆರು ಹಾಡುಗಳನ್ನು ಬರೆಯಲು ಒಪ್ಪುತ್ತ ಇದ್ದೇ ಎಂದವರು ಸುನಿ,ನನಗೆ ಹಾಡನ್ನು ಬರೆಯಲು ನಿರ್ಮಾಪಕರ ತಂಡ ಹೊಟೇಲ್ ಉಧ್ಯಮಿಗಳು ಆಗಿರುವುದರಿಂದ ಪೂಸಿ ಹೊಡೆಯಲು ತಿಂಡಿ ಊಟ ತಂದು ನನ್ನ ಹತ್ತಿರ ಬರ್ತಾ ಇದ್ರು. ಆಗಲ್ಲಪ್ಪ ಅಂದ್ರು ಕೇಳಲಿಲ್ಲ,ಆಮೇಲೆ ನಿಮ್ಮ ಹಣೆ ಬರಹ ಏನಾದ್ರೂ ಮಾಡಿಕೊಳ್ಳಿ ಎಂದು ಕೊಯ್ಯೋ ಕುಯ್ಯೋ ....ಹಾಡು ನೀಡಿದ್ದನ್ನು ನಿರ್ದೇಶಕ ಶಷಾಂಕ್ ನೆನಪಿಸಿಕೊಂಡರು.

ಶ್ರೀ ಸಂತೋಷ್ ಗುರೂಜಿ ಅವರು ಬೆಳ್ಳಿ ಇಂದ ಮಾಡಿದ ಪೆನ್ ಅನ್ನು ಕೆಲವರಿಗೆ ನೀಡಿದರು. ಅವರ ಭಾಷಣದಲ್ಲಿ ಗುರೂಜಿ ಅವರು ಭಾವ ಮೈತ್ರಿ ಹಾಗೂ ಶಬ್ದ ಮೈತ್ರಿ ಹಾಡು ಸಂಯೋಜನೆ ಮಾಡಲಾಗಿದೆ,ಆರು ನಿರ್ದೇಶಕರುಗಳು ಬರೆದಿರುವ ಹಾಡುಗಳನ್ನು ಆರು ಋತುಗಳಿಗೆ ಹೊಲಿಸಿದರು,ನಮ್ಮ ಆಶ್ರಮದಲ್ಲಿ ಈ ಮುಗ್ಧ ಹುಡುಗರು ಸಂಕಲ್ಪ ಮಾಡಿದ ಚಿತ್ರ ಮುದ್ದು ಮನಸೇ ಪ್ರೇಕ್ಷಕರ ಮುದ್ದನ್ನು ಪಡೆಯುವಂತಾಗಲಿ ಎಂದು ಹರಸಿದರು.

ಮುದ್ದು ಮನಸೇ