ಬಾಯಿ ಚಪ್ಪರಿಸುವ ಒಗ್ಗರಣೆ

  • IndiaGlitz, [Saturday,June 07 2014]

ಈ ಒಗ್ಗರಣೆ ಮಹತ್ವವೇ ಅಂತಹುದು. ಚಿಟಪಟ ಅಂತ ಸದ್ದು ಮಾಡಿ ಹೊಟ್ಟೆ ಹಸಿವನ್ನು ಜಾಸ್ತಿ ಮಾಡುತ್ತದೆ. ಒಗ್ಗರಣೆ ಸಿನೆಮದಲ್ಲೂ ಸಹ ಅದೇ ಆಗಿರುವುದು. ಆಹಾ...ಅದೇನು ತಿಂಡಿ ತಿನಿಸುಗಳ ನೋಟ ಅಂತೀರಾ. ನೀವು ಹೊಟ್ಟೆ ಬಾಕರಾಗಿ ಬಿಡುತ್ತೀರ. ಅದರ ಮಧ್ಯೆ ರಸವಾಂಗಿ ಹಾಗೆ ಮಾವಿನ ಕಾಯಿ ಚಿತ್ರಾನ್ನ ತರಹ ಪ್ರೇಮಿಗಳಿದ್ದಾರೆ. ಹಾಗಲ ಕಾಯಿ ಪಲ್ಯ ತರಹ ಪ್ರೀತಿಗೆ ಅಡ್ಡಗೋಡೆ ಸಹ ಬಂದು ಬಿಡುತ್ತದೆ.

ಕೇವಲ ಊಟದ ಹೆಸರುಗಳನ್ನು ಇಟ್ಟುಕೊಂಡೇ ಬೇಕಾದರೂ ಈ ಚಿತ್ರದ ವಿಮರ್ಶೆ ಸಹ ಮಾಡಬಹುದು. ಹಾಗೆ ಮಾಡಿದ್ದಾರೆ ಪ್ರಕಾಶ್ ರಾಜ್! ಆ ‘ಜೋನ್ ರೈನ್ಬೋ’ ಕೇಕ್ ನಾಲ್ಕು ದಿವಸದಲ್ಲಿ ಅದನ್ನು ಪ್ರೀತಿಸಿ ಮಾಡುವ ಬಗೆ ಪ್ರಕಾಶ್ ರಾಜ್ ಹಾಗೂ ಸ್ನೇಹ ಅವರು ಬಾಯಿಗೆ ಇಟ್ಟುಕೊಳ್ಳುವ ಸಮಯ ಇದೆಯಲ್ಲ ನೋಡುಗರ ಬಾಯಲ್ಲೂ ನೀರುರುವುದು ಖಂಡಿತ. ಹೀಗೆ ಚಿತ್ರದಲ್ಲಿ ಹಿಡಿತ ಬಿಡದೆ ಪ್ರಕಾಶ್ ರಾಜ್ ಅವರು ನಿರ್ದೇಶನದಲ್ಲಿ, ನಿರ್ಮಾಣದಲ್ಲಿ ಹಾಗೂ ನಟನೆಯಲ್ಲಿ ಕೇಕ್ ವಾಲ್ಕ್ ಮಾಡಿಬಿಡುತ್ತಾರೆ.

ದೇಶ ಕಂಡ ಅಮೋಘ ನಟರುಗಳಲ್ಲಿ ಒಬ್ಬರಾದ ಪ್ರಕಾಶ್ ರಾಜ್ ಅವರು ‘ಸಾಲ್ಟ್ ಎನ್ ಪೆಪ್ಪರ್’ ಮಲಯಾಳಂ ಸಿನೆಮಾದ ತಿರುಳನ್ನು ಹಿಡಿದು ಸಂಪೂರ್ಣ ಎಳೆ ಹಾಸನದ ಸೌತೆಕಾಯಿ ಸ್ವೀಕರಿಸುವಂತೆ ಮಾಡಿದ್ದಾರೆ. ಬೇಷ್ ಅನ್ನಲೆ ಬೇಕು.

ಒಂದು ಘಳಿಗೆ ಆ ಬಕಾಸುರನ ಜ್ಞಾಪಕ ಬರುತ್ತೆ. ಅದಕ್ಕೆ ಅಷ್ಟೊಂದು ಅಡುಗೆಗಳನ್ನು ಪ್ರಕಾಶ್ ರಾಜ್ ಪರಿಚಯಿಸುವುದು ಆರಂಬದಲ್ಲಿ. ಅವರೇ ಮಸಾಲ ವಡೆಯನ್ನು ತಿನ್ನುವುದು ನೋಡಿದರೆ ನಾವೇ ಕಿತ್ತುಕೊಂಡು ತಿನ್ನಿಬಿಡೋಣ ಅನ್ನಿಸುವುದು ಉಂಟು. ಮದುವೆ ಆಗಲು ಹೆಣ್ಣು ನೋಡಕ್ಕೆ ಬರುವ ಕಾಳಿದಾಸ ಎಂದೋ ತಿಂದ ಮಸಾಲ ವಡೆ ರುಚಿ ಮರು ಪರಿಚಯ ಆಗಿ ಅಲ್ಲಿಂದ ಹುಡುಗಿ ಬದಲು ಅಡಿಗೆ ಅವನನ್ನೇ ಎತ್ತಕಿಕೊಂಡು ಹೋಗಿಬಿಡುತ್ತಾನೆ.

ಒಟ್ಟಿಗೆ ಹೊಟ್ಟೆ ತುಂಬಿಸುವಷ್ಟು ಹಾಗೂ ಮನಸ್ಸು ತಣಿಸುವಷ್ಟು ಇದೆ ಈ ‘ಒಗ್ಗರಣೆ’. ಯಾವುದೇ ಹೊಟೇಲ್ ಈ ‘ಒಗ್ಗರಣೆ’ ಸಿನೆಮಾದ ಜೊತೆ ಒಡಂಬಡಿಕೆ ಮ&