ಬಾಸು ಅದೇ ಹಳೇ ಕಥೆಗೆ ಯು-ಎ ಪತ್ರ

  • IndiaGlitz, [Tuesday,May 06 2014]

ಉತ್ಸಾಹಿ ಯುವಕ ಶಾನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ಬಾಸು ಅದೇ ಹಳೆ ಕಥೆ’ ಇದೀಗ ಸೆನ್ಸಾರ್ ಮಂಡಳಿ ಇಂದ ‘ಯು-ಎ’ ಅರ್ಹತಾ ಪತ್ರವನ್ನು ಪಡೆದುಕೊಂಡಿದೆ.

ಹಿರಿಯ ನಿರ್ದೇಶಕ ಎ ಆರ್ ಬಾಬು ಅವರ ಪುತ್ರ ಶಾನ್ ಅವರು ನಟ ಹಾಗೂ ನಿರ್ದೇಶಕ ಆಗಿ ‘ಬಾಸು ಅದೇ ಹಳೇ ಕಥೆ’ ಸಿನೆಮವನ್ನು ವಿಶೇಷವಾಗಿ ಸಿದ್ದಪಡಿಸಿದ್ದಾರೆ. ಏಳು ನಿಮಿಷ ತೆರೆಯ ಮೇಲೆ ಯಾರು ಕಾಣಿಸಿಕೊಳ್ಳುವುದಿಲ್ಲ ನಿಮಿಷದಲ್ಲೆ ಚಿತ್ರದ ಕಥೆ ಹೇಳಿ ಮುಗಿಸಿರುತ್ತಾರೆ. ಇದಾದ ಮೇಲೆ ಎರಡು ಘಂಟೆ ಕಥೆಯ ಓಟ ನೀವು ನೋಡಬಹುದು. ಈ ಚಿತ್ರ ಮಾಡಲು ನನ್ನ ಅಪ್ಪ ಹಾಗೂ ಸಂಕಲನಕಾರ ಸ್ಯಾಮ್ ನನಗೆ ಬೆಂಗಾವಲಾಗಿ ಪ್ರೋತ್ಸಾಹಿಸಿದರು ಎಂದು ಶಾನ್ ಹೇಳಿಕೊಳ್ಳುತ್ತಾರೆ.

ನಾಯಕಿ ಶೋಬಿನ ಅವರು ಈ ಹಿಂದೆ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ ಆರ್ ಬಾಬ್ಬಿ ಅವರು ಎರಡು ಹಾಡುಗಳ ರಾಗ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಒಂದು ಹಾಡನ್ನು ಕೆ ಜೆ ಯೇಸುದಾಸ್ ಅವರು ಹೇಳಿದ್ದಾರೆ. ಗಣೇಶ್ ಈ ಚಿತ್ರದ ಛಾಯಾಗ್ರಾಹಕರು. ಆರ್ಯ ಮೌರ್ಯ ಗೌಡ ಅವರು ಈ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದಾರೆ.