ಮೃಗಶಿರ ಡಿ ಟಿ ಎಸ್

  • IndiaGlitz, [Monday,November 10 2014]

ಕರ್ನಾಟಕದ ಪ್ರಕ್ಷುಬ್ದ ಪ್ರದೇಶವಾದ ತೊಬ್ಬೆಟ್ಟು ಅರಣ್ಯ ಪ್ರದೇಶ ಕುಂದಾಪುರ ಬಳಿ ಬಹುತೇಕ ಚಿತ್ರೀಕರಣ ಮಾಡಿರುವ ಮೃಗಶಿರ ಕನ್ನಡ ಸಿನಿಮಾ ಆಕಾಶ್ ಸ್ಟುಡಿಯೋದಲ್ಲಿ ಡಿ ಟಿ ಎಸ್ ಕೆಲಸವನ್ನು ಪೂರ್ತಿಗೊಳಿಸಿಕೊಂಡಿದೆ.

ನಿರ್ಮಾಪಕ ಚನ್ನಪ್ಪ ಹಾಗೂ ಮೋಹನ್ ಕುಮಾರ್ ಅವರ ಪ್ರಥಮ ಪ್ರಯತ್ನ ಮೃಗ ಮನಸ್ಸಿನ ಸ್ಥಿತಿ ಗತಿ ಸಹ ತೆರೆಯ ಮೇಲೆ ನೋಡಬಹುದು. ಶ್ರೀವತ್ಸ ಅವರು ಮೊದಲ ಪ್ರಯತ್ನದಲ್ಲೇ ಒಂದು ವಿನೂತನ ಆದ ಚಿತ್ರವನ್ನು ನೀಡಲು ನಿರ್ದೇಶಕರಾಗಿ ಪಾದ ಬೆಳಸಿದ್ದಾರೆ. ಹೆಜ್ಜೆ ಹೆಜ್ಜೆಗು ಕುತೂಹಲ,ಕೌತುಕ ಸನ್ನಿವೇಶ ಈ ಚಿತ್ರದಲ್ಲಿ ನೀವು ನೋಡಬಹುದು.

ಮೃಗಶಿರ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್,ಪನ್ನಗಾಭರಣ,ತಬ್ಲಾ ನಾಣಿ ಅರಣ್ಯ ಪ್ರದೇಶಕ್ಕೆ ಆಗಮಿಸಿದಾಗ ಆಗುವ ಘಟನೆಗಳು ಬಹಳ ಕುತೂಹಲಕಾರಿ ಆಗಿಯೇ ಮೂಡಿಬಂದಿದೆ.ಮಾನಸ ರೊಮಾನ್ಸ್ ತೆಲುಗು ಸಿನಿಮಾದಲ್ಲಿ ಅಭಿನಯಿಸಿ ಈ ಕನ್ನಡ ಚಿತ್ರಕ್ಕೆ ನಾಯಕಿ ಆಗಿ ಅಭಿನಯಿಸಿದ್ದಾರೆ. ಕೃಷ್ಣ ಮೋಹನ್,ಸಿದ್ದರಾಜ ಕಲ್ಯಾಣ್ಕರ್,ಸಾಧು ಕೋಕಿಲ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

ಶ್ರೀಕಾಂತ್ ಅವರ ಸಂಭಾಷಣೆ,ರವಿ ಬಸ್ರೂರ್ ಅವರ ಸಂಗೀತ,ಶ್ರೀನಿವಾಸ್ ರಾಮಯ್ಯಾ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಒದಗಿಸಿದ್ದಾರೆ.