ಯಾರಿಗೆ ಇಡ್ಲಿ ವಿಶೇಷತೆ

  • IndiaGlitz, [Wednesday,October 01 2014]

ಯಾರಿಗಾನಾ ಇಡ್ಲಿ ಇಡಪ್ಪ ಆದ್ರೆ ಮರಿದೆ ನಕ್ಕು ನಲಿಸುವಂತೆ ಮಾಡಪ್ಪ. ಇದು ನಿರ್ದೇಶಕ ಯಶ್ವಂತ್ ಸರದೇಶಪಾಂಡೆ ಅವರಿಗೆ ಹೇಳುವ ಮಾತು. ಸಧ್ಯಕ್ಕೆ ವಿಶೇಶಪ್ಪ ಏನಪ್ಪಾ ಅಂದರೆ ಇಡ್ಲಿ ತಂಡ ಅಮಿತಾಭ್ ಬಚ್ಚನ್ ಅವರನ್ನು ಬೇಟಿ ಆಗಿ ಸಂತೋಷಗೊಂಡಿದೆ. ಯಶ್ವಂತ್ ನಗುವಿಗೆ ಇನ್ನೊಂದು ಹೆಸರು. ಎದ್ರೆ ಕುಂತ್ರೆ ಅವರ ಮಾತು,ಶೈಲಿ ನಗು ತರಿಸುವುದಿದೆ. ಈ ಬಾರಿ ಇಡ್ಲಿ ಶೀರ್ಷಿಕೆ ಅವರಿಗೆ ಸಂತೋಷ ಆಗಿದೆ. ಅವರ ಯಾವ ರೀತಿಯ ಮಸಾಲ ಇಡ್ಲಿ ಸಿಗಲಿದೆ ಪ್ರೇಕ್ಷಕನಿಗೆ. ಕಾದು ನೋಡಬೇಕಿದೆ.

ವಿಶ್ವಜಿತ್ ಹರೀಶ್ ಅರ್ಪಿಸುವ,ಗುರುಬಲ ಎಂಟರ್ ಟೈನರ್ ನಿರ್ಮಾಣದ ಯಾರಿಗೆ ಇಡ್ಲಿ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಆರು ಹಾಡುಗಳ ಚಿತ್ರೀಕರಣ ಬಾಕಿಯಿದೆ.

ಯಶವಂತ ಸರದೇಶಪಾಂಡೆ ಕಥೆ,ಚಿತ್ರಕಥೆ,ಸಂಭಾಷಣೆ ಹಾಗೂ ನೀರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ವಿಶ್ವಜಿತ್ ಹರೀಶ್ ನಾಯಕ ನಟನಾಗಿ,ಮೇಘಾ ಶೆಣೈ ನಾಯಕಿ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಹಿರಿಯ ಕಲಾವಿದರಾದ ದೊಡ್ಡಣ್ಣ,ಅವಿನಾಶ್,ಗಿರಿಜಾ ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಾಧವರಾಜ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದಾರೆ.