ರಾಧಿಕಾ ಪಾಧುಕೆ!

  • IndiaGlitz, [Friday,October 04 2013]

ಇದೇನಿದು ರಾಧಿಕಾ ಪಾಧುಕೆ ಅಂದಿರ. ಅದೇ ಕಾಲ್ಗುಣ. ನಟಿ ರಾಧಿಕಾ ಪಂಡಿತ್ ಅವರು ಕಾಲ್ಗುಣ ಅಂತಹುದು. ಅವರು ಅಭಿನಯಿಸಿದ ಬಹುತೇಕ ಸಿನೆಮಗಳು ಗಲ್ಲಾ ಪೆಟ್ಟಿಗೆಯಲ್ಲಿ ಗಡದ್ದಾಗಿ ಸದ್ದು ಮಾಡಿದೆ. ಮೊಗ್ಗಿನ ಮನಸು ಇಂದ ಹಿಡಿದು ರಾಧಿಕಾ ಪಂಡಿತ್ ಅವರು ಲಕ್ಕಿ ನಾಯಕಿ ಎಂದು ಗಾಂಧಿನಗರ ಮಾತನಾಡಿದೆ. ರಾಧಿಕಾ ಸಧ್ಯಕ್ಕೆ ಅಮೆರಿಕ ಪ್ರವಾಸದಿಂದ ವಾಪಸ್ಸಾಗಿದ್ದಾರೆ.

ರಾಧಿಕಾ ಪಂಡಿತ್ ಅವರ ಅಲೆಮಾರಿ, ಅದ್ಧೂರಿ ಲವು ಗುರು ಕೃಷ್ಣನ್ ಲವ್ ಸ್ಟೋರಿ, ಹುಡುಗರು ಡ್ರಾಮ ಸಿನೆಮಗಳು ಬಾಕ್ಸ್ ಆಫೀಸು ದೊಡ್ಡ ಸುದ್ದಿ ಹಾಗೂ ಸದ್ದು ಮಾಡಿದೆ.

ಆದರೆ ಒಲವೇ ಜೀವನ ಲೆಕ್ಕಾಚಾರ, ಗಾನ ಭಜಾನ ಬ್ರೇಕಿಂಗ್ ನ್ಯೂಸ್ ಸಾಗರ್ ಅವರ ಮೊದಲ ಚಿತ್ರ 18 ಕ್ರಾಸ್ ಶಿವರಾಜಕುಮಾರ್ ಜೊತೆಗಿನಕಡ್ಡಿ ಪುಡಿ ಯಶಸ್ಸಿನ ಮೆಟ್ಟಿಲು ಏರಿಲ್ಲ.

ಹೊಸಬರ ಪಾಲಿಗಂತೂ ರಾಧಿಕ ಪಂಡಿತ್ ಸಕ್ಕತ್ ಲಕ್ಕಿ ನಾಯಕಿ.

ಈಗ ಒಂದು ಸಿನೆಮಾದಲ್ಲಿ ಅಭಿನಯಿಸಿದ ಸುಮಂತ್ ಶೈಲೆಂದರ್ ನಾಯಕ ಆಗಿರುವ ದಿಲ್ವಾಲಾ ಇದೆ ಶುಕ್ರವಾರ ಅಂದರೆ ಮಹಾಲಯ ಅಮಾವಾಸ್ಯೆ ಬಿಡುಗಡೆ ಗೊಳ್ಳುತ್ತಿದೆ.

ರಾಧಿಕಾ ಪಂಡಿತ್ ಅವರ ಉಪಸ್ಥಿತಿ ಇನ್ ದಿಲ್ ವಾಲಾ ಚಿತ್ರಕ್ಕೆ ಮತ್ತೊಮ್ಮೆ ಈ ಪಾದ ಪುಣ್ಯ ಪಾದ...ಎಂಬ ಹಾಡಿನಂತೆ ಆಗುವುದೇ