ಲಾರೆನ್ಸೆ ಟಾಲ್ಕಿಂಗ್!

  • IndiaGlitz, [Wednesday,November 20 2013]

ಇದೊಂದು ಭಕ್ತಿ ಹಾಗೂ ಪವಾಡಗಳ ಮಿಶ್ರಣದ ಸಿನೆಮಾ ಕರ್ಕಾಳದ ಪವಾಡ ಪುರುಷ ಸಂತ ಲಾರೆನ್ಸೆ ಮಾತುಗಳನ್ನು ಜೋಡಿಸಿಕೊಂಡು ಇದೀಗ ರೇರೆಕಾರ್ಡಿಂಗ್ ಕೋಣೆಗೆ ತಲುಪಿ ಸಧ್ಯದಲ್ಲೇ ಮೊದಲ ಪ್ರತಿಯನ್ನು ಪಡೆದು ಕೊಂಡು ಸೆನ್ಸಾರ್ ಬಳಿ ಬರಲಿದೆ ಎಂದು ಚಿತ್ರದ ನಿರ್ಮಾಪಕ ಸ್ಟೀಫನ್ ಮೆಂಡಿಸ್ ಅವರು ನಿರ್ಮಾಪಕರು.

ವೈನ್ ವರ್ಲ್ಡ್ ಇಂಟರ್ ನ್ಯಾಷನಲ್ ಸಂಸ್ಥೆಯ ಕರ್ಕಾಳದ ಪವಾಡ ಪುರುಷ ಸಂತ ಲಾರೆನ್ಸೆ ಚಿತ್ರವು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣವಾಗಿ ಬೆಂಗಳೂರಿನ ಕಗ್ಗಲಿಪುರ ಚರ್ಚ್ ಅಲ್ಲಿ ಸಹ ಚಿತ್ರೀಕರಣ ಕೆಲವು ದಿವಸ ನಡೆಸಲಾಗಿದೆ.

ಕರ್ಕಾಳದ ಪವಾಡ ಪುರುಷ ಸಂತ ಲಾರೆನ್ಸೆ ಜೀವನದ ಆಧಾರದ ಮೇಲೆ ಚಿತ್ರದ ಕಥೆ ರಚಿಸಲಾಗಿದ್ದು ಇದರಲ್ಲಿ ಅನೇಕ ಪವಾಡಗಳನ್ನು ತೆರೆಯಮೇಲೆ ಹೇಳಲಾಗಿದೆ.

258 ಎ ಡಿ ಕಥೆ ಹಿನ್ನಲೆ ಇರುವ ವ್ಯಕ್ತಿ ಚಿತ್ರ ಇದು. ಪ್ರಾಚೀನ ರೋಮ್ ದೇಶದಲ್ಲಿ ನಡೆದ ಸಂದರ್ಭಗಳನ್ನು ಚಿತ್ರಕತೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರವೀಣ್ ತಕೋಟ್ ನಿರ್ದೇಶನದ ಈ ಚಿತ್ರಕ್ಕೆ ಶಂಕರ್ ಅವರ ಛಾಯಾಗ್ರಹಣ ಬಾಲ ಅವರ ಸಂಗೀತ ಇರುವ ಈ ಚಿತ್ರದಲ್ಲಿ ಆರು ಹಾಡುಗಳಿವೆ.

ತಾರಾಗಣದಲ್ಲಿ ರವಿ ಚೇತನ್, ಭವ್ಯ ಟೆನ್ನಿಸ್ ಕೃಷ್ಣ, ರೇಖ ದಾಸ್, ಶೋಬಾರಾಜ್ ಸ್ವಸ್ತಿಕ್ ಶಂಕರ್ ಮನ್ಮೋಹನ್ ರಾಯ್ ಅಲ್ಲ್ವಿಂಡ್ ಡಿ ಸಿಲ್ವ ಶಕ್ತಿ ಹಾಗೂ ಇತರರು ಇದ್ದಾರೆ.

More News