ಸಿಕ್ಕಾಪಟ್ಟೆ ಎ ಸರ್ಟಿಫಿಕೆಟ್

  • IndiaGlitz, [Friday,May 02 2014]

2011 ಜೂನ್ ಚಿತ್ರೀಕರಣ ಪ್ರಾರಂಭ, 2013 ಜೂನ್ ಧ್ವನಿ ಸುರುಳಿ ಬಿಡುಗಡೆ, 2014 ಜೂನ್ ಚಿತ್ರ ಬಿಡುಗಡೆ? ಇದು ‘ಸಿಕ್ಕಾಪಟ್ಟೆ ಇಷ್ಟಪಟ್ಟೆ’ ಸಿನೆಮಾದ ವಿವರ. ಸಧ್ಯಕ್ಕೆ ಏಪ್ರಿಲ್ ಮಾಸದಲ್ಲಿ ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ದೊರತಿದೆ. ಐವರು ನಾಯಕಿಯರು ಅದರಲ್ಲಿ ನಮಿತಾ ಕಪೂರ್ ಸಹ ಅಭಿನಯ. ಗ್ಲಾಮ್ ಅಂಶಗಳಿಗೆ ಕೇಳಬೇಕೆ. ಈ ವರದಿಯ ಜೊತೆಗೆ ಲಗತ್ತಿಸಿರುವ ಫೋಟೋ ನೋಡಿದರೆ ತಿಳಿಯುತ್ತೇ. ಎಲ್ಲ ತಂಡರ್ ತೊಡೆಗಳೆ!

ಪ್ರಿಯಮ್ ಕ್ರಿಯೇಷನ್ಸ್, ಲಾಂಛನದಲ್ಲಿ ಎಸ್.ಆರ್. ಮನೋಹರನ್ ನಿರ್ಮಿಸಿರುವ, ಹರಿರಾಜನ್ ನಿರ್ದೇಶನದ, ಸಿಕ್ಕಾಪಟ್ಟೆ ಇಷ್ಟಪಟ್ಟೆ ಚಿತ್ರಕ್ಕೆ ಸೆನ್ಸಾರ್ ಮಂಡಲಿಯು ಎ ಸರ್ಟಿಫಿಕೆಟ್ ನೀಡಿದೆ. ಮೇ ೨೩ ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಛಾಯಾಗ್ರಹಣ ಜೆ.ಜೆ.ಕೃಷ್ಣ, ಸಂಗೀತ ಕಾರ್ತಿಕ್ ಭೂಪತಿರಾಜ, ನೃತ್ಯ ತ್ರಿಭುವ್ ಪ್ರಸಾದ್, ಸಾಹಸ ಕೌರವ ವೆಂಕಟೇಶ್ ತಾರಾಗಣದಲ್ಲಿ ನಮಿತ, ಶ್ರವಂತ್, ಕಿರಣ್, ಅನೀಶ್, ಮನೀಶ್, ಮೇಘನಾ ನಾಯ್ಡು, ಹರಿರಾಜನ್,ಕೀರ್ತಿ ಚಾವ್ಲ, ಶಿವಾನಿ, ರವೀಂದ್ರನಾಥ್ ಮುಂತಾದವರು ಅಭಿನಯಿಸಿದ್ದಾರೆ.