ಸುಬ್ರಮಣಿ ಎರಡು ಹಾಡು ಕ್ಲೈಮಾಕ್ಸ್ ಬಾ

  • IndiaGlitz, [Monday,September 15 2014]

ಸುಷ್ಮಾ ಕ್ರಿಯೇಷನ್ ಅಡಿಯಲ್ಲಿ ತಯಾರಾಗುತ್ತಿರುವ ಸುಬ್ರಮಣಿ...ನಂ ಹುಡ್ಗ ಚಿತ್ರೀಕರಣ ಬಿರುಸಿನಿಂದ ಮುಗಿಸಿಕೊಂಡು ಇದೀಗ ಕ್ಲೈಮಾಕ್ಸ್ ಹಂತಕ್ಕೆ ಬಂದು ಕೇವಲ ಎರಡು ಹಾಡುಗಳನ್ನು ಚಿತ್ರೀಕರಿಸಿದರೆ ಚಿತ್ರೀಕರಣ ಸಂಪೂರ್ಣ.

ಎಸ್ ಸುನಿಲ್ ಯಾದವ್ ಅವರ ನಿರ್ಮಾಣದ ಸುಬ್ರಮಣಿ ಚಿತ್ರಕ್ಕೆ ಸೀತಾರಾಂ ಜಿ ಎಸ್ ವಿ ಅವರ ಛಾಯಾಗ್ರಹಣ,ಜೂಡ್ ಸ್ಯಾಂಡಿ ಅವರ ಸಂಗೀತ ನಿರ್ದೇಶನವಿದೆ.

ಶ್ರೀನಗರ ಕಿಟ್ಟಿ ಅವರಿಗೆ ನಾಯಕಿಯರಾಗಿ ದಿಶಾ ಪಾಂಡೆ,ಪೂರ್ಣಿಮ ಇದ್ದಾರೆ,ಶರತ್ ಲೋಹಿತಾಶ್ವ,ವಸಿಷ್ಠ ಎನ್ ಸಿಂಹ,ಅರುಣ್ ದೇವಸ್ಯ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

ಚಿನ್ನಿ ಪ್ರಕಾಷ್ ಅವರ ನೃತ್ಯ,ಸುನಿಲ್,ಚೇತನ್ ಸಹಾಯ ನಿರ್ದೇಶನ,ಕೆ ಡಿ ವೆಂಕಟೇಶ್ ಅವರ ಸಾಹಸ,ಶಿವಪ್ರಸಾದ್ ಯಾದವ್ ಅವರ ಸಂಕಲನ,ಶಿವು ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.

ಶತ್ರು ನಂತರ ಜೆ ಕೆ ಅವರು ಜೆ ಕೆ ಎಸ್ ಆಗಿ ಕಥೆ,ಚಿತ್ರಕಥೆ,ಸಂಭಾಷಣೆ ಹಾಗೂ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ.