ಸೆಟ್ಟೇರಿದ ಕಲಿಯುಗ

  • IndiaGlitz, [Saturday,December 21 2013]

‘ಕಲಿಯುಗ’ ಆರಂಭಕ್ಕೆ ಒಂದು ಪುಷ್ ಸಿಕ್ಕಿತು – ಅದೇ ಶ್ರೀ ರಿಶಿಕುಮಾರಸ್ವಾಮಿ ಸಿನೆಮಾದಲ್ಲಿ ಅಭಿನಯಿಸ ಬೇಕೆ ಬೇಡವೇ ಎಂದು. ಅದು ವಿಲ್ಲೈನ್ ಪಾತ್ರದಲ್ಲಿ. ಮಾಧ್ಯಮದ ಮುಂದೆಯೂ ಬಂದರು. ಐದು ಹಿರಿಯ ಸ್ವಾಮಿಗಳು ನಾನು ಆರಾದಿಸುವವರು ಹೇಳಿದರೆ ಅಭಿನಯಿಸಲು ಸಿದ್ದ ಎಂದು ಬಿಟ್ಟರು ವಿವಾದವನ್ನೇ ಬೆನ್ನ ಹಿಂದೆ ಕಟ್ಟಿಕೊಂಡಿರುವ ಸ್ವಾಮೀಜಿ.

ಹಿಂದಿಯ ನಟ ಮೋಹಿತ್ ಮಿಶ್ರ ಶ್ರೀ ರಿಶಿಕುಮಾರ ಸ್ವಾಮೀಜಿ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ. ಅಂದಮೇಲೆ ಅವರು ಖಳ ನಟ ಅಂದ ಹಾಗಾಯಿತು.

ಗೌರೀ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಕಲಿಯುಗ ಚಿತ್ರದಚಿತ್ರೀಕರಣವುಇದೇ ೧೩ ರಂದು ವಿಜಯನಗರ ೨ನೇ ಹಂತದಲ್ಲಿ ಶ್ರೀ ಸಂಕಷ್ಟಹರಗಣಪತಿದೇವಸ್ಥಾನದಲ್ಲಿಆರಂಭವಾಯಿತು.

ಚಿತ್ರದ ಮುಹೂರ್ತದೃಶ್ಯಕ್ಕೆ ಲವ್ಲಿ ಈ ರಕ್ಷೀನೇ ನಮ್ಮ ಪ್ರೀತಿಗೆ ದಿಕ್ಷೇಕಣೋಎಂದು ನಾಯಕನಿಗೆ ರಕ್ಷೆಕಟ್ಟುವ ಸನ್ನಿವೇಶವನ್ನು ಮನೋಹರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಚಲಪತಿ ಚಿತ್ರಿಸಿಕೊಂಡರು. ಚಿತ್ರದಚಿತ್ರೀಕರಣವುಜನವರಿ ಮೊದಲ ವಾರದಿಂದ ಮುಂದುವರೆಯಲಿದೆಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆಅಭಿನಂದನ್ ಶ್ರೀಧರ್ ಸಂಭಾಷಣೆ, ಮನೋಹರ್ಛಾಯಾಗ್ರಹಣ, ಶಿವಸಂತೋಷ್ ಸಂಗೀತ,ವಿನೋದ್ರಾವ್, ಸತೀಶ್ ಕಲೆ, ಮಾಸ್ ಮಾದ ಸಾಹಸ, ಮನು ನೃತ್ಯ, ಸೋಮು ನಿರ್ಮಾಣ ಮೇಲ್ವಿಚಾರಣೆಯಿದ್ದು, ಎಸ್. ವಿ. ರಾಜೇಂದ್ರಸಿಂಗ್ (ಬಾಬು), ಓಂಪ್ರಕಾಶ್ರಾವ್, ವಿಜಯಲಕ್ಷ್ಮೀಸಿಂಗ್ ಮುಂತಾದವರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಚಲಪತಿಚಿತ್ರದಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.

ತಾರಾಗಣದಲ್ಲಿ ಪ್ರತೀತ್ ಅಕ್ಕಿ, ಪ್ರಿಯಾಂಕ ಮಲ್ನಾಡ್, ಮೋಹಿತ್ ಮಿಶ್ರ, ಓಂಪ್ರಕಾಶ್ರಾವ್,ರವಿ, ಕಿಂಗ್ ಮೋಹನ್, ಹರೀಶ್ರಾಯ್ ಮುಂತಾದವರಿದ್ದಾರೆ.