ನಿನ್ ಮುಖ ನಾಯಿ ನೆಕ್ಕ

  • IndiaGlitz, [Monday,October 06 2014]

ಬೈಗುಳ ಅಂದರೆ ಇದಪ್ಪ. ಅಂತಹ ಸುಂದರವಾದ ನಾಯಕಿ ರಾಧಿಕಾ ಪಂಡಿತ್ ಅವರಿಗೆ ಯಾರಿಗಾದರೂ ಬೈಯಕ್ಕಾದರೂ ಮನಸ್ಸು ಬರುತ್ತದೆಯೇ. ಅವರ ಬ್ಯೂಟಿ ಹಾಗಿದೆ ಅದರ ಜೊತೆಗೆ ಬಹದ್ದೂರ್ ಚಿತ್ರದಲ್ಲಿ ಪಾಪದ ಹುಡುಗಿ ಕಣ್ರೀ. ಅಂತ ಹುಡುಗಿಗೆ ಹೋಗಿ ನಾಯಕ ಧ್ರುವ ಸರ್ಜಾ ನಿನ್ ಮುಖ ನಾಯಿ ನೆಕ್ಕ ಅಂತ ಬೈತಾನೆ. ಕೇಳಿದವರಿಗೆ ಅಸಹ್ಯ. ಇನ್ನೂ ಪಾತ್ರ ವಹಿಸಿದವರಿಗೆ? ತೆಗದ್ ಒಂದು ಮುಖಕ್ಕೆ ಬಿಡೋಣ ಅನ್ನಿಸಲ್ವಾ. ಇಲ್ಲಿ ಗಮನಿಸಬೇಕಾದ ವಿಷಯ ಇನ್ನೊಂದು. ನಾಯಕ ನಾಯಿ ವಂಶದವನೆನಲ್ಲ. ಅವನು ರಾಜರ ಮನೆತನದವನು. ಅವನಿಗೆ ಹೀಗೆ ಬೈಗುಳ ಕೊಡೋದು ತಪ್ಪು.

ಸಂಭಾಷಣೆ ಓಗದಲ್ಲಿ ನಿರ್ದೇಶಕರೂ ಜ್ಞಾಪಕ ಇಡಬೇಕಾದ ವಿಚಾರ ಏನಪ್ಪಾ ಅಂದರೆ ಹಾಗೆ ಬೈದ ಹುಡುಗಿಗೆ ನಾಯಕ ಹಿಂದೆ ಬೀಳೋದು ಯಾಕೆ ಅಂತ. ನಾಯಕಿ ನನ್ನ ಹಿಂದ್ ಹಿಂದೆ ಬರಬೇಡ ಅನ್ನೋದೆ ತಪ್ಪೇ.

ರಾಧಿಕಾ ಪಂಡಿತ್ ಅಂತೂ ಬೆರಗಾಗಿ ನಿಂತು ಬಿಡ್ತಾರೆ ಈ ಬೈಗುಳಕ್ಕೆ. ನನಗೆ ಯಾಕೆ ಹಿಂಗೆಲ್ಲ ಬೈತಿಯ ಅಂತ ಆಮೇಲೆ ಕೇಳ್ತಾಳೆ. ಆದರೆ ಅದು ಪ್ರೇಕ್ಷಕ ಮಹಾಪ್ರಭುವಿಗೆ ಸರಿ ಬರಲ್ಲ. ಇನ್ನೂ ರಾಧಿಕ ಪಂಡಿತ್ ಅಭಿಮಾನಿಗಳಿಗೆ ನಿಜಕ್ಕೂ ರೋಸಿ ಹೋಗುತ್ತದೆ.

ಧ್ರುವ ಸರ್ಜಾ ಮೊದಲ ಸಿನೆಮಾ ಅದ್ಧೂರಿ ಅಲ್ಲಿ ಇಂತಹ ಸ್ಪೀಡ್ ಸಂಭಾಷಣೆ ಹೇಳಿ ಅದನ್ನು ಇಲ್ಲೂ ಮುಂದುವರೆಸಿದ್ದಾರೆ. ಅದಕ್ಕೆ ನಮ್ಮ ತಕರಾರೆನಿಲ್ಲ. ಗೆದ್ದು ಹಿಡಿದ ಬಾಲವನ್ನು ಹಿಡಿದು ಹೋಗುತ್ತೇನೆ ಅಂದರೆ ಯಾರು ಏನು ಮಾಡಕ್ಕೆ ಆಗುತ್ತೆ. ಭೂಮಿ ಮ್ಯಾಲೆ ಮಣ್ಣಿದೆ,ಬಂದುಕ್ ಆಗ ಬುಲ್ಲೆಟ್ ಇದೆ,ನನ್ ಮೈನಾಗ ಪೊಗುರು ಐತೀ... ಅನ್ನುವಂತಹ ಪಡ್ಡೆ ಹುಡುಗರ ಸಂಭಾಷಣೆ ಸಾಕಷ್ಟು ಕಡೆ ಬಿಸಕಿದ್ದಾರೆ ಧ್ರುವ.

ಆದರೆ ಧ್ರುವ ಸರ್ಜಾ ಏನು ಶಾರ್ಜಾ ದಲ್ಲಿ ಇಂಡಿಯ ಹಾಗೂ ಪಾಕಿಸ್ತಾನ್ ಕ್ರಿಕೆಟ್ ಇವರೇ ಗೆಲ್ಲಿಸಿಕೊಟ್ಟ ಹಾಗೆ ಆಡಬಾರದು. ಎಲ್ಲ ಸಮಯಕ್ಕು,ಎಲ್ಲ ಪರಿಸ್ಥಿತಿಗೂ ಒಂದೇ ದಾಟಿಯ ಸಂಭಾಷಣೆ ಒಪ್ಪಿಸುವುಯ ಶೈಲಿ ಸರಿಯಾದ ಮಾರ್ಗ ಅಲ್ಲ.