close
Choose your channels

ಪುಂಗಿ ದಾಸ ಯು-ಎ ಪತ್ರ

Monday, May 19, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಹಾಸ್ಯ ರಸದೌತಣಕ್ಕೂ ಯು-ಎ ಅರ್ಹತ ಪತ್ರವೆ ಸೆನ್ಸಾರ್ ಮಂಡಳಿ ಇಂದ ಅಂತ ಕೇಳುವ ಹಾಗಿಲ್ಲ. ನಿರ್ದೇಶಕರು ಸೆನ್ಸಾರ್ ರೀತಿ ನೀತಿಗಳನ್ನು ತಿಳಿದುಕೊಳ್ಳದೆ ಇರುವಾಗ ಹೀಗೆಲ್ಲಾ ಆಗುವುದು.

ಪುಂಗಿ ಊದಿದ್ದಕ್ಕೆ ಕೊನೆಗೂ ಯು/ಎ ಅರ್ಹತಾ ಪತ್ರ ಸೆನ್ಸಾರ್ ಮಂಡಳಿ ಇಂದ ಭಾನುವಾರ ಸಂಜೆ ಲಭಿಸಿದೆ.

ಬೀದರ್ ಕೋಟೆಯಲ್ಲಿ ಹಾಡಿನ ಚಿತ್ರೀಕರಣದೊಂದಿಗೆ ‘ಪುಂಗಿದಾಸ’ ಚಿ ತ್ರ ಸಂಪೂರ್ಣ ಚಿತ್ರೀಕರಣ ಆಗಿ ಚಿತ್ರೆತರ ಚಟುವಟಿಗೆಗಳು ನಡೆಯುತ್ತಿರುವಾಗಲೇ ಅದಕ್ಕೆ ಬೇರೆ ಭಾಷೆಯಿಂದ ಬೇಡಿಕೆ ಸಹ ಬಂದಿದೆ.

ಕೋಮಲ್ ಕುಮಾರ್ ಅವರ ಮತ್ತೊಂದು ನಿರೀಕ್ಷಿತ ಚಿತ್ರ ‘ಪುಂಗಿ ದಾಸ’ ಚಿತ್ರದ ನಿರ್ದೇಶಕ ಶ್ರೀನಾಥ್ ‘ರಾಂಬೋ’ ನಿರ್ದೇಶಕರು, ‘ವಿಕ್ಟರಿ’ ಚಿತ್ರಕ್ಕೆ ಕಥೆ ಒದಗಿಸಿರುವವರು ಈ ಬಾರಿ ಒಂದು ವಿಚಿತ್ರ ಹಾಗೂ ಸಮಾಜದಲ್ಲಿ ಜರಗುವ ಸಂಗತಿಯನ್ನು ಇಟ್ಟುಕೊಂಡೇ ನಕ್ಕು ನಗಿಸಲು ಕೋಮಲ್ ಕುಮಾರ್ ಅವರ ಇಮೇಜ್ ಅನ್ನು ಬಳಸಿಕೊಳ್ಳುತ್ತಿದ್ದಾರೆ.

ಮನೆಯಲ್ಲಿ ತಾತ ಅಸುನೀಗಿದ್ದಾನೆ. ಆದರೆ ಆತ ಸಾಲ ಕೊಟ್ಟಿರುವ ತಾತ ಹಾಗೂ ಪಡೆದಿರುವ ಘಾಟಿ ತಾತ. ಅದನ್ನು ಪಡೆಯಲು ಹ್ಯಾಗಗೆಲ್ಲ ಪುಂಗಿ ಊದಬೇಕಾಗಬಹುದು ಎಂಬುದು ಚಿತ್ರದ ತಿರುಳು.

ಕೋಮಲ್ ಕುಮಾರ್ ಅವರಿಗೆ ಆಸ್ಮ ಎಂಬುವರು ನಾಯಕಿ. ಆರ್ ಎನ್ ಸುದರ್ಶನ್ ತಾತ, ಸೌಕರ್ ಜಾನಕಿ ಅವರು ಅಜ್ಜಿ ಪಾತ್ರದಾರಿ. ಬಿ ಸಿ ಪಾಟೀಲ್, ಆಶಿಷ್, ತಬ್ಲ ನಾಣಿ, ಕುರಿ ಪ್ರತಾಪ್, ಬುಲ್ಲೆಟ್ ಪ್ರಕಾಷ್, ಪದ್ಮಜ ರಾವು, ಮುಖ್ಯ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಇದ್ದಾರೆ.

ಪುಂಗಿ ದಾಸ’ ಚಿತ್ರಕ್ಕೆ ಸಂಗೀತದ ಪುಂಗಿ ಊದುತ್ತಿರುವವರು ಫರ್ಹಾನ್ ರೋಶನ್ (ಈ ಹಿಂದೆ ಏಮಿಲ್ ಎಂದು ಪರಿಚಯ ಅದವರು ನಂದ ಲವ್ಸ್ ನಂದಿತಾ ಚಿತ್ರದ ಜಿಂಕೆಮರಿ ಹಾಡಿನ ಖ್ಯಾತಿ). ಅರುಳ್ ಅವರ ಛಾಯಾಗ್ರಹಣವಿದೆ.ಎಸ್ ಎಸ್ ವಿ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದ ನಿರ್ಮಾಪಕರು ಸದಾಶಿವ.

Follow us on Google News and stay updated with the latest!   

Comments

Welcome to IndiaGlitz comments! Please keep conversations courteous and relevant to the topic. To ensure productive and respectful discussions, you may see comments from our Community Managers, marked with an "IndiaGlitz Staff" label. For more details, refer to our community guidelines.
settings
Login to post comment
Cancel
Comment