ಸುಮಂತ್ ಬ್ಯಾಕ್

  • IndiaGlitz, [Thursday,January 23 2014]

ಅಪ್ಪನ ನೆರಳಿನಲ್ಲಿ ಎರಡು ಸಿನೆಮಗಳಲ್ಲಿ ಅಭಿನಯಿಸಿ ಇದೀಗ ಅಪ್ಪನ ಮೂರನೇ ಸಿನೆಮಕ್ಕೂಸುಮಂತ್ ನಾಯಕ. ಮನೆಯಲ್ಲಿ ನಾಯಕ ಇದ್ದಾನೆ ಇನ್ಯಾರು ಬೇಕು ಎಂದು ಸಂತೋಷದಿಂದ ಹೇಳಿಕೊಂಡಿದ್ದರು ಶೈಲೇಂದ್ರ ಬಾಬು ಎಂಬ ಹಿರಿಯ ನಿರ್ಮಾಪಕರು. ಸುಮಂತ್ ಅವರು ‘ಬೆತೆನೆಗೆರೆ’ ಸಿನೆಮಾದಲ್ಲಿ ಅಭಿನಯಿಸಿ ಈಗ ಫ್ರೀ ಆಗಿದ್ದಾರೆ. ದಿಲ್ವಾಲ ಸಕ್ಸಸ್ ಇಂದ ಅಪ್ಪ ಮಗನ ಮೇಲಿನ ವಾತ್ಸಲ್ಯವನ್ನು ಇನ್ನಷ್ಟು ಕೋಟಿಗಳಲ್ಲಿ ಪೊರೆಯಲಿದ್ದಾರೆ.

‘ಆಟ’ ಚಿತ್ರದಲ್ಲಿ ಲವರ್ ಬಾಯ್, ‘ದಿಲ್ವಾಲ ಚಿತ್ರದಲ್ಲಿ ಸ್ವಲ್ಪ ಸೀರಿಯಸ್ ಹಾಗೂ ಈಗ ಸಂಪೂರ್ಣ ಕಾಮಿಡಿ ಸಿನೆಮಾದಲ್ಲಿ ಸುಮಂತ್ ನಾಯಕರಾಗಿ ‘ತಿರುಪತಿ ಎಕ್ಸ್ಪ್ರೆಸ್’ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ಫೆಬ್ರವರಿ ಮೂರರಿಂದ ಆರಂಭವಾಗಲಿದೆ. ಮೈಸೂರು, ಬೆಂಗಳೂರು ಹಾಗೂ ತಿರುಪತಿಯಲ್ಲಿ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.

ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರಬಾಬು ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಪಿ.ಕುಮಾರ್ ನಿರ್ದೇಶಿಸುತ್ತಿದ್ದಾರೆ. ಹಿಂದೆ ಕುಮಾರ್ ‘ವಿಷ್ಣುವರ್ಧನ ಹಾಗೂ ‘ಚಾರುಲತಾ ಚಿತ್ರಗಳನ್ನು ನಿರ್ದೇಶಿಸಿದ್ದರು.

ಅರ್ಜುನ್ಜನ್ಯ ‘ತಿರುಪತಿ ಎಕ್ಸ್ಪ್ರೆಸ್ಗೆ ಸಂಗೀತ ನೀಡುತ್ತಿದ್ದು ಜಗದೀಶ್ವಾಲಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಗೌತಮ್ರಾಜ್ ಸಂಕಲನ, ಕಣ್ಣನ್ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮಂತ್, ಕೃತಿ ಕರಬಂದ, ಸಾಧುಕೋಕಿಲ, ಬುಲೆಟ್ಪ್ರಕಾಶ್, ಅಶೋಕ್ ಮುಂತಾದವರಿದ್ದಾರೆ.