1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಶಿವಾಜಿನಗರ ಎರಡು ಹಾಡು ಮುಗೀತು

IndiaGlitz [Wednesday, December 04, 2013]
Comments

ಬೆಂಗಳೂರಿನಲ್ಲಿ ಬಹಳ ಜನಪ್ರಿಯ ಹಾಗೂ ಟೆಂಷನ್ ಏರಿಯಾ ಅಂದರೆ ಶಿವಾಜಿನಗರ . ಈಗ ಅದೇ ಹೆಸರಿನ ಸಿನೆಮಾ ಬಹುತೇಕ ಪೂರ್ತಿಯಾಗಿದ್ದು ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.

' ಶಿವಾಜಿನಗರ ಕನ್ನಡ ಚಿತ್ರಕ್ಕೆ ಚಿಕ್ಕಮಗಳೂರಿನಲ್ಲಿ ಒಂದು ಸೆಟ್ ಹಾಕಿ ಮತ್ತು ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಅಲ್ಲಿ ಒಂದು ಸೆಟ್ ರಚಿಸಿ ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ರಾಮು ಫಿಲ್ಮ್ ಅವರ ಶಿವಾಜಿನಗರ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಪೂರ್ತಿಯಾಗಿದೆ ಎಂದು ನಿರ್ದೇಶಕ ಪಿ ಎನ್ ಸತ್ಯ ತಿಳಿಸುತ್ತಾರೆ. ಅಂದು ಕಲಾಸಿಪಾಳ್ಯ' 2005 ರಲ್ಲಿ ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಿ ಇಂದು ಅದೇ ಲಾಂಛನದಲ್ಲಿ ಶಿವಾಜಿನಗರ'. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ' ಘೂಳಿ ನಿರ್ದೇಶನ ಮಾಡಿದ್ದರು ,ನಾಯಕ ನಟ ವಿಜಯ್ ಕಂಠೀರವ 'ಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು.

ಜಾಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಮ್ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹಾಯಕ ನಿರ್ದೇಶನ , ರಾಮ್ ಲಕ್ಷ್ಮಣ್ , ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಇದ್ದಾರೆ. ಪ್ರದೀಪ್ ರಾವತ್ ಅಭಿಮನ್ ಸಿಂಗ್, ಆದಿತ್ಯ ಮೆನನ್ ಸುಮಿತ್ರಾ ಅವಿನಾಷ್ ಸತ್ಯಜಿತ್ , ಹುಳಿವಾನ್ ಗಂಗಾಧರ ಶ್ರೀ ನಿವಾಸ್ ಪ್ರಭು , ಮೈಸೂರು ಮಲ್ಲೇಶ್ ಅಡಿಗ , ಅಶೋಕ್ ರಾವು ಅಲ್ಲದೆ 20 ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.



Other News


KM Nearing Completion

Nagendra Vara Prasada!

‘ಪುಂಗಿ ದಾಸ’ ಹಾಡು ಮುಗೀತು

‘ಪ್ರೀತಿ ಗೀತಿ ಇತ್ಯಾದಿ’ ಮಾತು ಮುಗೀತು

KM Nearing Completion





Copyright 2016 IndiaGlitz. All rights reserved. This material may not be published, broadcast, rewritten, or redistributed.



Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.