1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಮಿನರ್ವಮಿಲ್ನಲ್ಲಿ ಕೋಬ್ರ

IndiaGlitz [Wednesday, February 26, 2014]
Comments

ವಿಲನ್ ಕಡೆಯವರನು ನಾಯಕನ ಕಡೆಯವರು ಅಪಹರಿಸಿ ಕೊಲೆ ಮಾಡಿರುತ್ತಾರೆ. ಇದೇ ಸೇಡಿನಿಂದ ವಿಲನ್ ಹಾಗೂ ಆತನ ಸಹಚರರು ನಾಯಕನ ಕಡೆಯವರನ್ನು ಅಪಹರಿಸಿಕೊಂಡು ಬಂದು ಕೊಚ್ಚಿ ಹಾಕುತ್ತಾರೆ. ಈ ಸನ್ನಿವೇಶವನ್ನು ಕೆ.ಕೆ.ಮೂವೀಸ್ ಲಾಂಛನದಲ್ಲಿ ಮಾಹಿನ್ ಅವರು ನಿರ್ಮಿಸುತ್ತಿರುವ 'ಕೋಬ್ರ ಚಿತ್ರಕ್ಕಾಗಿ ನಿರ್ದೇಶಕ ಎಚ್.ವಾಸು ಮಿನರ್ವ್ಮಿಲ್ನಲ್ಲಿ ಚಿತ್ರಿಸಿಕೊಂಡರು. ಈ ಭಾಗದ ಚಿತ್ರೀಕರಣಕ್ಕಾಗಿ ಕಲಾನಿರ್ದೇಶಕ ಬಾಬುಖಾನ್ ಮಾಂಸದ ಮಾರುಕಟ್ಟೆಯ ಸೆಟ್ ನಿರ್ಮಿಸಿದ್ದರು. ಕೌರವ ವೆಂಕಟೇಶ್ ಅವರು ಸಾಹಸ ನಿರ್ದೇಶನ ಮಾಡಿದ ಈ ಸನ್ನಿವೇಶದಲ್ಲಿ ಮಾಹಿನ್, ದುಬೈರಫ಼ೀಕ್ ಹಾಗೂ ಇಪ್ಪತ್ತಕ್ಕೂ ಹೆಚ್ಚು ಸಾಹಸ ಕಲಾವಿದರು ಅಭಿನಯಿಸಿದ್ದರು.

ದುನಿಯಾ ವಿಜಯ್ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಸೋನಾ ಛಾಬ್ರಾ, ಮಾಹಿನ್, ರವಿಕಾಳೆ, ಶೋಭ್ರಾಜ್, ಸತ್ಯಜಿತ್, ಫ಼ಜರ್ಖಾನ್, ದುಬೈ ರಫ಼ೀಕ್, ಧರ್ಮ, ಬಚ್ಚನ್, ನಸೀರ್, ಮಾಲತಿ ಸರ್ ದೆಶಪಾಂಡೆ, ಅನಂತವೇಲು, ಮಾ:ರಾಹುಲ್, ಮಾ:ಪ್ರಫುಲ್, ಮಾ:ಜಯಂತ್, ಕು.ಇಂಪನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮಾಹಿನ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ ಬರೆದಿದ್ದಾರೆ. ಧರ್ಮಾ ವಿಷ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ ಹಾಗೂ ರವಿವರ್ಮ, ಕೆ.ಡಿ.ವೆಂಕಟೇಶ್, ಗಣೇಶ್(ಚೆನೈ) ಸಾಹಸ ನಿರ್ದೇಶನ 'ಕೋಬ್ರ ಚಿತ್ರಕ್ಕಿದೆ.
ಬೆಂಕಿಪಟ್ಣ ಚಿತ್ರಕ್ಕೆ ಹಾಡಿದ ವಿಜಯ್

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.