1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಕಾಂಜೀ ಪಿಂಜಿ ಲವ್ ಒಂದು ಸಾಹಸ ಮೂರು ಹಾ

IndiaGlitz [Saturday, March 01, 2014]
Comments

ಭದ್ರಾವತಿ ರಾಮಕೃಷ್ಣ ನಿರ್ದೇಶನದ ಪ್ರಥಮ ನಿರ್ದೇಶನದ ಚಿತ್ರ 'ಕಾಂಜೀ ಪಿಂಜಿ ಲವ್'.. ಆದ್ರೂ ಸ್ವಲ್ಪ ಸೀರಿಯಸ್, ಭದ್ರಾವತಿ ನಿವಾಸಿಗಳಾದ ಅಕ್ಬರ್, ಕುಮಾರ್ ಹಾಗೂ ಶರಿಫ್ ಅವರ ಪ್ರಥಮ ನಿರ್ಮಾಣದ ಚಿತ್ರ ಶಿವಮೊಗ್ಗ ಸುತ್ತ ಮುತ್ತ - ಹೊಸನಗರ, ತೀರ್ಥಹಳ್ಳಿ, ಕವಳೆ ದುರ್ಗ, ಭದ್ರಾವತಿ ಸ್ಥಳಗಳಲ್ಲಿ ಮಾತಿನ ಭಾಗದ ಹಾಗೂ ಕೆಲವು ಹಾಡುಗಳ ಚಿತ್ರಕರಣ ಮುಗಿಸಿ ಶುಕ್ರವಾರ ಸಂಜೆ ಮಾಧ್ಯಮದ ಮುಂದೆ ಚಿತ್ರೀಕರಣದ ಸಂತೋಷವನ್ನು ಹಂಚಿಕೊಂಡಿತು.

ಕಳೆದ ಜೂಲೈ ತಿಂಗಳಿನಲ್ಲಿ ಪ್ರಾರಂಭವಾದ ಈ ಸಿನೆಮಾ ಐದು ಹಾಡುಗಳಲ್ಲಿ ಎರಡು ಹಾಡುಗಳನ್ನು ರೆಡಿ ಆಗಿದ್ದು ಮೂರು ಹಾಡುಗಳನ್ನು ಕಂಠೀರವ ಸ್ಟುಡಿಯೋದಲ್ಲಿ ಕೆಲವು ಸೆಟ್ ಹಾಕಿ ಚಿತ್ರೀಕರಿಸಕೊಳ್ಳಲಿದೆ. ಪ್ರೀತಿಯ ವ್ಯಾಲ್ಯು ಅರಿತು ಪ್ರೀತಿ ಮಾಡಿ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಭದ್ರಾವತಿ ರಾಮಕೃಷ್ಣ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಸಹ ರಚಿಸಿದ್ದಾರೆ. ಧ್ರುವ ರಾಜ್ ಅವರ ಸಂಗೀತ ಇದೆ. ಪ್ರಮೋದ್ ಅವರ ಛಾಯಾಗ್ರಹಣ, ಧ್ರುವ ರಾಜ್ ಅವರ ಸಂಗೀತ, ಪವನ್ ಕುಮಾರ್ ಅವರ ಸಂಕಲನ, ಸುಪ್ರೀಂ ಸುಬ್ಬು ಅವರ ಸಾಹಸ,

ನೃತ್ಯ ಪಟು ವಿಜಯ್ ಈ ಚಿತ್ರದ ನಾಯಕ, ದೀಪಿಕ ದಾಸ್ ಕಥಾ ನಾಯಕಿ. ಅಪ್ಪು ವೆಂಕಟೇಶ್, ಸತ್ಯಜಿತ್, ಅವಿನಾಷ್, ರಂಗಸ್ವಾಮಿ, ಕಾಶಿ, ಮನದೀಪ್ ರಾಯ್, ಎಂ ಎಸ್ ಉಮೇಶ್ ಸಹ ತಾರಗಣದಲ್ಲಿ ಇದ್ದಾರೆ.

ಶುಕ್ರವಾರ ಪತ್ರಿಕಾ ಗೋಷ್ಠಿ ಅನ್ನು ಉದ್ದೇಶಿಸಿ ಚಿತ್ರದ ನಿರ್ಮಾಪಕರದ ಕುಮಾರ್, ಶರಿಫ್ ತಂಡದ ಪರಿಶ್ರಮವನ್ನು ಕೊಂದಡಿದರು. ದೀಪಿಕ ದಾಸ್ ಅವರ ಅಭಿನಯ ಚಾತುರ್ಯವನ್ನು ಶರಿಫ್ ಅವರು ವಿಶೇಷವಾಗಿ ಶ್ಲಾಗಿಸಿದರು.

ಚಿತ್ರದ ವಿಲ್ಲನ್ ಪಾತ್ರದಾರಿ ಅಲಿ ಖಾನ್ ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಸಂತೋಷ ಹೇಳಿಕೊಂಡರು. ದೀಪಿಕ ದಾಸ್ ಅವರು ನಾಯಕಿ ಆಗಿ ಎರಡು ಷೇಡ್ಗಳಲ್ಲಿ ಅಭಿಯಾನಿಸಿದ್ದಾರೆ. ಅದ್ಬುತ ಚಿತ್ರೀಕರಣದ ಸ್ಥಳಗಳನ್ನು ನಿರ್ದೇಶಕ ಹಾಗೂ ನಿರ್ಮಾಪಕರುಗಳು ಆಯ್ಕೆ ಮಾಡಿಕೊಂಡದಕ್ಕೆ ಧನ್ಯವಾದ ತಿಳಿಸಿದರು. ಇದೊಂದು ಕ್ಯೂಟ್ ಲವ್ ಸ್ಟೋರಿ - ನಾಯಕನನ್ನು ಪ್ರೀತಿಸಿ ನಂತರ ಗೋಳು ಹ್ಯುಕೊಳ್ಳೋದು ದೀಪಿಕ ಅವರ ಪಾತ್ರದ ವಿಶೇಷ. ಚಿತ್ರದ ಮತ್ತೊಬ್ಬ ನಾಯಕಿ ರಕ್ಷ ಇದರಲ್ಲಿ ನೆಗೆಟಿವ್ ಷೇಡ್ ಅಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕ ವಿಜಯ್ ಡಾನ್ಸರ್ ಅದವರು ಈ ಚಿತ್ರದ ನಾಯಕ ಸಾಹಿತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿ, ಪ್ರೇಮದ ಅರಮನೆಯಲ್ಲಿ ಕಳೆಯೋದು ಗಳಿಸೋದು ಚಿತ್ರದ ಪ್ರಮುಖ ಅಂಶಗಳು. ಈ ಚಿತ್ರಕ್ಕೆ ಕವಳೆ ದುರ್ಗ ಸ್ಥಳದಲ್ಲಿ ಅತ್ಯಂತ ಕಷ್ಟಕರ ಆದರೂ ಇಡೀ ತಂಡ ನಿರ್ಮಾಪಕರಿಗೆ ಸಹಕಿರಿಸಿ ಚಿತ್ರಿಕರಣ ಮಾಡಿತು ಎಂದು ಹೇಳಿಕೊಂಡರು. ಚಿತ್ರದ ಸಂಗೀತ ನಿರ್ದೇಶಕ ಧ್ರುವರಾಜ್ ರೀರಿಕಾರ್ಡಿಂಗ್ ಕೆಲಸದಲ್ಲಿ ತೊಡಗಿಕೊಂಡಿರುವುದಾಗಿ ಹೇಳಿಕೊಂಡರು. ಛಾಯಾಗ್ರಾಹಕ ಪ್ರಮೋದ್ ಸಹ ಪತ್ರಿಕಾ ಗೋಷ್ಠಿ ಅಲ್ಲಿ ಉಪಸ್ತಿತರಿದ್ದರು.
Ambi to SingaporeOther News


Happy Birthday Sudeep

Soori Self Promoter

'Gurbi' Gets U

Krishna Struggle

'Charle' Ready

'Raj Bahaddur' Audio Comes

'Adbutha' Starts

RCV Gets Award

Setback On State Award

Lavish Wedding

'MMM' My Dream Mano Murthy

Mada Mass Manasi Class!

Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.