Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಹಂಸ ಅತ್ಯಂತ ವಯಸ್ಸಾದವರು!

IndiaGlitz [Tuesday, April 01, 2014]
Comments

ಹೀಗಂದರೆ ಯಾರಿಗಾದರೂ ಕೋಪ ಬರುವುದೇ. ತುಂಬಿದ ಸಭೆಯಲ್ಲಿ 'ಒಗ್ಗರಣೆ' ಧ್ವನಿ ಸುರುಳಿ ಸಮಾರಂಭದಲ್ಲಿ ನಟ ಮಂಡ್ಯ ರಮೇಶ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾ ಹಂಸಲೇಖ ಅತ್ಯಂತ ಹಿರಿಯರು ಎಂದು ಸಂಬೋದಿಸಿದರು. ಆದರೆ ಅಲ್ಲಿ ಅತ್ಯಂತ ಹಿರಿಯರು ಅಂತ ಇದ್ದವರು ಹಿರಿಯ ನಟಿ ಭಾರ್ಗವಿ ನಾರಾಯಣ್. ಅವರು ಮೊಮ್ಮೊಗಳ ಸಿನೆಮಾ ಆದ್ದರಿಂದ ಅಂದಿನ ಕಾರ್ಯಕ್ರಮಕ್ಕೆ ಬಂದಿದ್ದರು. ಕನ್ನಡ ಸಿನೆಮಾ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ವಿರಳ. ಹಿಂದಿ ಸಿನೆಮಾ ಅಲ್ಲದೆ ರಂಗಭೂಮಿಯಲ್ಲಿ ಹೆಸರು ಮಾಡಿರುವ ಪ್ರಕಾಷ್ ಬೆಳವಾಡಿ ಅವರ ತಾಯಿ ಅವರು. ಅಂದು ಅವರು ಮಗಳಾದ ಸುಧ ಬೆಳವಾಡಿ ಜೊತೆ ಕುಳಿತು ಮೊಮ್ಮೊಗಳು ಸಂಯುಕ್ತ ಬೆಳವಾಡಿ ಅಭಿನಯಿಸಿರುವ ಸಿನೆಮಾ ಧ್ವನಿ ಸುರುಳಿಗೆ ಆಗಮಿಸಿದ್ದರು. ಅವರಿಗೂ ಒಂದು ಕಸಿವಿಸಿ ಮೊಮ್ಮಗಳ ತುಟಿಗೆ ನಾಯಕ ತೇಜಸ್ ಮುತ್ತು ಕೊಟ್ಟಾಗ ಆಗಿರಲೇಬೇಕು.

ಆದರೆ ವಿಷಯ ಏನಪ್ಪಾ ಅಂದರೆ ಹಂಸಲೇಖ ಅವರಿಗೆ ಅತ್ಯಂತ ಹಿರಿಯರು ಎಂದಾಗ ಕೋಪ ಬಂದಿದ್ದು. ಏನಪ್ಪಾ ಮಂಡ್ಯ ರಮೇಶ ನೀನು ಕರೆದಾಗಲೆಲ್ಲ ನಿನ್ನ ನಟನ ರಂಗಭೂಮಿ ಕಾರ್ಯಕ್ರಮಕ್ಕೆ ಬಂದಿದ್ದೆನಲ್ಲ ಅಂದು ಹಂಸ ಹೇಳಿಕೊಂಡರು ಹಾಗೂ ವಯಸ್ಸಾದವರಂತೆ ಅವರು ಸಭೆಯಲ್ಲಿ ನಡೆದರು ಅವರನ್ನು ಕೈ ಹಿಡಿದು ಮೈಕ್ ಕೊಟ್ಟವರು ಪ್ರಕಾಷ್ ರಾಜ್. ಈ ಚಿತ್ರದಲ್ಲಿ ಕಾಣುವುದು ಆ ಸಂದರ್ಭದ್ದು. ಒಂದು ವಿಷಯ ಮಾತ್ರ ಸರಿ. ಹಂಸಲೇಖ ಹಿರಿಯರು ಎಂಬುದು ಅವರ ಭಾಷಣದಿಂದ ವ್ಯಕ್ತವಾಯಿತು. ಅವರು ನಟರುಗಳಿಗೆ ಕೊಟ್ಟ ಪೆಟ್ಟು, ಇಳಯರಾಜ ಅಂತವರಿಗೆ ಹೊಗಳಿದ ಮಾತುಗಳು, ಪ್ರಕಾಷ್ ರಾಜ್ ಕೈಗೆ ಸಿಗದ ಮಿಸ್ಸೈಲ್, ಅವರು ನಟನ ಗೌರವವನ್ನು ಹೆಚ್ಚು ಮಾಡಿದ್ದಾರೆ ಅಂತ ಹೇಳುತ್ತಲೇ ಅವರಿಗೆ ಸ್ವಂತ ಕಥೆಗಳ ಸಿನೆಮಾ ಮಾಡಿ ಎಂದು ಹೇಳಿದ ಕಿವಿ ಮಾತುಗಳು, ಜಯಂತ್ ಕಾಯ್ಕಿಣಿ ಅವರಂತಹ ಅದ್ಬುತ ಬರಹಗಾರಗಿಗೆ ಕೊಡ್ರಪ್ಪ ಫ್ರೀಡಂ ಎಂದು ಪುರಸ್ಕರಿಸಿದ್ದು, ಕನ್ನಡ ಚಿತ್ರಗೀತೆಗಳಲ್ಲಿ ನಿಮ್ಮ ಮೆಚ್ಚಿನ ಚಿತ್ರಗೀತೆ ಬದಲು ಇನ್ನು ನಿಮ್ಮ ಮಚ್ಚಿನ ಚಿತ್ರಗೀತೆಗಳು ಎಂದು ಬಂದರೂ ಅತಿಶಯ ಅಲ್ಲ ಏಕೆಂದರೆ ಅಷ್ಟೊಂದು ಮಚ್ಚು ಹಿಡಿದ ನಾಯಕರುಗಳೆ ಕಾಣುತ್ತಿದ್ದಾರೆ ಎಂದು ಹಂಸಲೇಖ ಉಗಾದಿ ಹಬ್ಬಕ್ಕು ಮುಂಚೆ ವರ್ಷ ತೊಡಕು ಮಾಡಿ ಮುಗಿಸಿದರು ತಮ್ಮ ಮಾತಿನಲ್ಲಿ.




Priyanka Promise Uppi



Other News

 Trio in 'Gajapade'
 'Dandu' Audio Comes
 Harish Raj Weds Shruthi
 Shoot in Metro!
 'Nimhans' is 'Usirigintha'
 ಕಾಂಚನ ಆರಂಭ
 ದಾದಾ ಈಸ್ ಬ್ಯಾಕ್
 Parthibhan in Kannada
 KFPA Meet in KFCC on AA
 Prasad Aploogize



Copyright 2014 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.