1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಗಜಕೇಸರಿ ಮಾಣಿಕ್ಯ ಭರಾಟೆ ನಂತರ

IndiaGlitz [Thursday, May 15, 2014]
Comments

ಹೌದು. ಈಗ ನಟ ಯಷ್ ಮುಂಚೂಣಿಯಲ್ಲಿ ಇರುವ ನಟ. ಅವರ ಸಿನೆಮಗಳು ಕೋಟಿಗಟ್ಟಲೆ ಸುರಿದರೂ ಕೋಟಿಗಟ್ಟಲೆ ಸಂಪಾದಿಸುತ್ತಿದೆ. ಅವರು ಒಂದು ಅರ್ಥದಲ್ಲಿ ಕೋಟಿ ನಟ! ಈಗ ವಿಚಾರ ಏನಪ್ಪಾ ಅಂದರೆ ಒಂದು ದೊಡ್ಡ ಸ್ಟಾರ್ ಸಿನೆಮಾ ಬಾಕ್ಸ್ ಆಫೀಸು ಅಲ್ಲಿ ಕೊಳ್ಳೆ ಹೊಡೆಯುತ್ತಿರುವಾಗ ಮತ್ತೊಂದು ಬಂದರೆ ಏನು ಚಂದ. ಅದನ್ನೇ ಅರಿತು ವಿತರಕ ಜಯಣ್ಣ ಕಂಬೈನ್ಸ್ ಅವರ 'ಗಜ ಕೇಸರಿ' ಚಿತ್ರವನ್ನೂ ಮುಂದಕ್ಕೆ ಹಾಕಿದ್ದಾರೆ.

ಈ ಕಡೆ 'ಮಾಣಿಕ್ಯ' ಬಾಕ್ಸ್ ಆಫೀಸು ಅಲ್ಲೂ 'ಮಾಣಿಕ್ಯವೇ' ಸರಿ ಎಂಬಂತೆ ಸಕ್ಕತ್ ಆಗಿ ಮುನ್ನುಗುತ್ತಿದೆ. ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ 'ಗಜಕೇಸರಿ 'ಚಿತ್ರ ಈ ತಿಂಗಳಲ್ಲೇ ಬಿಡುಗಡೆ ಮಾಡಲು ಸಿದ್ದವಾಗಿದೆ.

ಛಾಯಾಗ್ರಾಹಕರಾಗಿ ಖ್ಯಾತರಾಗಿರುವ ಎಸ್.ಕೃಷ್ಣ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸತ್ಯಹೆಗ್ಡೆ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾನಿರ್ದೇಶನ, ಗಣೇಶ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ವಿಜಯಕುಮಾರ್, ಭರತ್ ಅವರ ನಿರ್ಮಾಣ ನಿರ್ವಹಣೆ 'ಗಜಕೇಸರಿ 'ಚಿತ್ರಕ್ಕಿದೆ.

ಯಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಅಮೂಲ್ಯ. ಶ್ರೀನಿವಾಸಪ್ರಭು, ರಂಗಾಯಣರಘು, ಅಶೋಕ್, ಶಿವರಾಂ, ಸಾಧುಕೋಕಿಲ, ಪ್ರಭಾಕರ್, ಜಾನ್ವಿಜಯ್, ಶಬಾಸ್ಖಾನ್ ಮುಂತಾದವರು ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.
Saari Kane Audio ComesOther News


It is Threesome!

Pon Kumaran on Jayalalitha

Dr Hamsalekha Now

Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.