1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಅಂಬಿ ಸೂಪರ್ ಲುಕ್ಕು!

IndiaGlitz [Thursday, May 29, 2014]
Comments

ಡಾಕ್ಟರ್ ಅಂಬರೀಶ್ ಅವರು 'ಅಂಬರೀಷ' ಚಿತ್ರದಲ್ಲಿ ಹ್ಯಾಗೆ ಕಂಗೊಳಿಸುತ್ತಾರೆ ಎಂಬುದಕ್ಕೆ ಸಿನೆಮಾದ ಸ್ಥಿರ ಚಿತ್ರಗಳು ಬಂದಿವೆ. ಪಾಳೆಗಾರನ ಮೀಸೆ ಇಲ್ಲಿ ಅವಶ್ಯಕ. ಕಾರಣ ಅವರು ಪಾತ್ರ ನಿರ್ವಹಿಸುತ್ತಾ ಇರುವುದು ಬೆಂಗಳೂರನ್ನು ಕಟ್ಟಿದ ಕೆಂಪೇಗೌಡನ ಪಾತ್ರ. ಡಾಕ್ಟರ್ ಅಂಬರೀಶ್ ಅವರು ಈ ಮೀಸೆಗೆ ಎಷ್ಟು ಸಂಯಮ ವಹಿಸಿದ್ದರು ಅಂದರೆ ಅವರು ಅನಾರೋಗ್ಯದಿಂದ ಇರುವಾಗಲು ಮೀಸೆಗೆ ಕತ್ತರಿ ಬೀಳದ ಹಾಗೆ ನೋಡಿಕೊಂಡಿದ್ದರು.

ಆ ಮೀಸೆ 'ಅಂಬರೀಷ' ಸಿನೆಮಾದಲ್ಲಿ ಹ್ಯಾಗೆ ಕಾಣಿಸಲಿದೆ ಎಂಬುದು ಈಗ ಹೊರಬಿದ್ದಿದೆ. ಅಂಬರೀಶ್ ಅವರು ತಮ್ಮ ಒರಿಜಿನಲ್ ಮೀಸೆಗೆ ಕತ್ತರಿ ಹಾಕಿದ್ದಾರೆ. ಇದೆ ರೀತಿಯ ಮೀಸೆ ಕೃತಕವಾದದ್ದು ದಿಗ್ಗಜರು, ವೀರ ಪರಂಪರೆ ಸಿನೆಮಗಳಲ್ಲೂ ಅಂಬರೀಶ್ ಇಟ್ಟುಕೊಂಡಿದ್ದರು.

ಸುಖಧರೆಪಿಕ್ಟರž್ಸ್ ಲಾಂಛನದಲ್ಲಿಖ್ಯಾತ ನಿರ್ದೇಶಕ ಕೆ.ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ, ಅತ್ಯಂತಅದ್ದೂರಿ ವೆಚ್ಚದ ಈ ಚಿತ್ರದಲ್ಲಿಡಾ ಅಂಬರೀಶ್, ಬೆಂಗಳೂರಿನ ನಿರ್ಮಾತೃಕೆಂಪೇಗೌಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೆಂಪೇಗೌಡರ ಸಾಹಸ ಸಾಧನೆಯನ್ನು ಸಾರುವ ಕೋಡುಗಲ್ಲ ನೆತ್ತಿ ಮೇಲೆ ಬಿಚ್ಚುಗತ್ತಿಯೋಧಾ ನಿಂತಾ ಎನ್ನುವ ಸುಂದರ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಹಂಪೆಯಗತ ವೈಭವವನ್ನುಕಣ್ಣಿಗೆ ಕಟ್ಟುವಂತೆ ಕೃಪ್ಣದೇವರಾಯ ಮತ್ತು ಕೆಂಪೇಗೌಡರ ಸ್ನೇಹವನ್ನು ಮನಮುಟ್ಟುವಂತೆ, ಕಟ್ಟಿಕೊಡುವ ನಿರ್ದೇಶಕರ ಪ್ರಯತ್ನಕ್ಕೆಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ಸಾಹಿತಿ ನಾಗೇಂದ್ರಪ್ರಸಾದ್ ಕೈಜೊಡಿಸಿದ್ದಾರೆ.

ಡಾ ಅಂಬರೀಶ್, ದರ್ಶನಜೊತೆಗೆ ಬಹುಭಾಷಾ ತಾರೆ ಪ್ರಿಯಾಮಣಿ, ಬುಲ್ ಬುಲ್ಖ್ಯಾತಿಯ ರಚಿತಾರಾಮ್, ಬಾಲಿವುಡ್ನ ಖ್ಯಾತ ಖಳ ನಾಯಕ ಕಲ್ಲಿದೋಜಿಣ,ತುಳಸಿ, ಶರತ್ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ಸಾಧುಕೋಕಿಲ,ತಿಮ್ಮೇಗೌಡ, ನೆ.ಲ.ನೆರೇಂದ್ರಬಾಬು, ಮೊದಲಾದ ಭರ್ಜರಿ ತಾರಾಗಣಚಿತ್ರದಲ್ಲಿದೆ, ತಂತ್ರಜ್ಞರಾಗಿ ಸತ್ಯ ನಾರಾಯಣ್ ಛಾಯಾಗ್ರಹಣ ಚಿಂತನ್ ಸಂಭಾಷಣೆ, ಕೆ.ಎಂ ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ಮತ್ತು ಅನಿಲ್ ನಿರ್ಮಾಣ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ.
Grand Invite for Ravi Son!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.