Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಮಾತಿಗೆ ಖುಷಿಖುಷಿಯಾಗಿ

IndiaGlitz [Friday, June 13, 2014]
Comments

ಯಾವುದೇ ಮಾಧ್ಯಮದ ಮೀಟ್ ಇಲ್ಲದೆ ಗಣೇಶ್ ಹಾಗೂ ಅಮೂಲ್ಯ ನಟನೆಯ ಚಿತ್ರ 'ಖುಷಿ ಖುಷಿಯಾಗಿ' ಮಾತಿನ ಮನೆ ತಲುಪಿದೆ.'ಚೆಲುವಿನ ಚಿತ್ತಾರ' ದಲ್ಲಿ ತೇಲಿದವರು,'ಶ್ರಾವಣಿ ಸುಬ್ರಮಣಿ' ಅಲ್ಲಿ ನಕ್ಕು ನಳಿಸಿದ ಈ ಜೋಡಿ ಈಗ 'ಖುಷಿ ಖುಷಿಯಾಗಿ' ಚಿತ್ರದಿಂದ ಖುಷಿ ನೀಡಲಿದೆ. ಇದು ತೆಲುಗು ಭಾಷೆಯಲ್ಲಿ 2013 ರಲ್ಲಿ ಬಂದಂತಹ 'ಗುಂಡೇ ಜಾರಿ ಗಲ್ಲಂತಾಯಿದೆ' ಚಿತ್ರದ ರೀಮೇಕ್.

ಹೆಚ್.ಪಿ.ಆರ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಹರಿಪ್ರಸಾದ್ರಾವ್, ನಾಗೇಶ್ವರ್ರಾವ್ ಹಾಗೂ ವಿಜಯಕೃಷ್ಣ ಅವರು ನಿರ್ಮಿಸಿರುವ 'ಜಂಬೂ ಸವಾರಿ' ತೆಲುಗಿನ 'ಸ್ವಾಮಿ ರಾ ರಾ' ನಿರ್ಮಾಪಕರು ಈ ರೀಮೇಕ್ ಸಹ ಕನ್ನಡಕ್ಕೆ ತರುತ್ತಿದ್ದಾರೆ. 'ಖುಷಿಖುಷಿಯಾಗಿ 'ಚಿತ್ರಕ್ಕೆ ಆಕಾಶ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.

ಯೋಗಿ.ಜಿ.ರಾಜ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಗೋಲ್ಡನ್ಸ್ಟಾರ್ ಗಣೇಶ್ ಅಭಿನಯಿಸುತ್ತಿದ್ದಾರೆ. ಅಮೂಲ್ಯ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ನಂದಿನಿ ರೈ, ಸಾಧುಕೋಕಿಲ, ಸಿಲ್ಲಿಲಲ್ಲಿ ಆನಂದ್, ಅಚ್ಯುತಕುಮಾರ್, ಸಂಗೀತಾ ಮುಂತಾದವರಿದ್ದಾರೆ.

ಶ್ರೀಷ ಅವರ ಛಾಯಾಗ್ರಹಣರುವ ಈ ಚಿತ್ರಕ್ಕೆ ಅನೂಪ್ ರುವೆನ್ಸ  ಸಂಗೀತ ನೀಡುತ್ತಿದ್ದಾರೆ. ಜೋ.ನಿ.ಹರ್ಷ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ರವಿವರ್ಮರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶಿವು ಅವರ ಕಲಾ ನಿರ್ದೇಶನವಿದೆ.
ಮತ್ತೊಮ್ಮೆ ಶರಣ್

Copyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.