1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ನಟರೆಲ್ಲ ನಟರಲ್ಲ ಗೌಡ್ರು

IndiaGlitz [Tuesday, October 08, 2013]
Comments

ಇದೇನಪ್ಪ ನಟರುಗಳೆಲ್ಲ ನಟರೆ ಅಲ್ಲ ಅಂದುಬಿಟ್ಟರಲ್ಲ ಗೌಡ್ರು ಎಂದು ಕೆಲ ಸೆಕೆಂಡ್ಸ್ ಆಶ್ಚರ್ಯ ಆಯಿತು. ಮೊದಲು ಈ ಗೌಡ್ರು ಯಾರು ಅಂದರೆ ನಮ್ಮ ನೆಚ್ಚಿನ ಮೇಷ್ಟ್ರು ಕನ್ನಡ ಭಾಷೆಯ ಸಾಹಿತಿ ಕನ್ನಡ ಚಿತ್ರರಂಗದ ಸಿನಿಮಾ ಹಾಡುಗಳನ್ನು ಬರೆದಿರುವವರು,ಹಾಲಿ ವಿಧಾನ ಪರಿಷತ್ ಸದಸ್ಯರು ಆಗಾಗ್ಗೆ ನಟನೆ ಮಾಡಿ ಬೆಚ್ಚಿ ಬಿಳಿಸುವವ ಡಾಕ್ಟರ್ ದೊಡ್ಡರಂಗೆ ಗೌಡರು. ನಿನ್ನೆ ಅವರು ನವರಂಗಿ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ನವರಂಗಿ ಆಗಿ ಬಣ್ಣ ಬದಲಾಯಿಸುವ ರಾಜಕೀಯ ವ್ಯಕ್ತಿಗಳನ್ನು ಅವರು ಗಮನದಲ್ಲಿ ಇಟ್ಟುಕೊಂಡು ಮಾತನಾಡಿದ್ದು.

ನಾನು ವಿಧಾನ ಸೌಧದಲ್ಲಿ ನೋಡಿರುವ ನಟರುಗಳು ಮುಂದೆ ನಮ್ಮ ಸಿನೆಮಾ ನಟರುಗಳು ಏನು ಪ್ರಯೋಜನ್ ಇಲ್ಲ. ರಾಜಕೀಯ ವ್ಯಕ್ತಿಗಳೆ ನಿಜವಾದ ನಟರುಗಳು ಅವರು ಅಷ್ಟೊಂದು ಚೆನ್ನಾಗಿ ನಟಿಸುತ್ತಾರೆ ಎಂದು ಗೌಡರು ಹೇಳುವುದರಲ್ಲಿ ಲೇವಡಿ ಇತ್ತು ಬಿಡಿ.

ಡಾಕ್ಟರ್ ದೊಡ್ಡರಂಗೆ ಗೌಡರು ಹಿರಿಯರು ಇಂತಹ ರೀತಿ ಮಾತನಾಡಿ ರಾಜಕೀಯ ವ್ಯಕ್ತಿಗಳನ್ನು ದ್ವೇಷ ಕಟ್ಟಿಕೊಳ್ಳಬೇಕಾಗುತ್ತೆ ಎಂಬುದು ಅವರ ಯೋಚನೆಯಲ್ಲಿ ಇಲ್ಲ ಎಂಬುದು ಖಚಿತವಾಗಿದೆ.

ನನಗೂ ನವರಂಗಿ ಸಿನೆಮಕ್ಕೂ ಸಂಬಂದ ಇಲ್ಲ ಆದರೆ ನವ ಯುವಕ ಉಮೇಶ್ ಸಿನೆಮಾ ಒಂದರಲ್ಲಿ ಚರ್ಚೆಗೆ ಕುಳಿತಾಗ ಪರಿಚಯ ಆದವನು. ಆತನ ಪ್ರೀತಿಗೆ ಕಟ್ಟು ಬಿದ್ದು ಈ ಧ್ವನಿ ಸುರುಳಿಗೆ ಬರುವುದಕ್ಕೂ ಮುಂಚೆ ಹಾಡುಗಳ ಪಲ್ಲವಿಯನ್ನು ಕೇಳಿ ಕೊಂಡೆ. ರಾಜೇಶ್ ರಾಮನಾಥ್ ಸಂಗೀತ ನಿರ್ದೇಶಕರು ಎಂದು ತಿಳಿದ ಮೇಲೆ ಒಂದು ವಿಚಾರ ಸ್ಪಷ್ಟ ಆಯಿತು. ಶೇಖಡ 65 ಮಿನಿಮಮ್ ಗ್ಯಾರಂಟಿ ಸುಶ್ರಾವ್ಯ ಸಂಗೀತ ಇರುತ್ತೆ ಎಂದು ಮೇಷ್ಟ್ರು ಮಾರ್ಕ್ಸ್ ಕೊಟ್ಟೆ ಬಿಟ್ಟರು.
Poonam Pandey Sizzles!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.