1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ರಾಜ್ಯೋತ್ಸವಕ್ಕೆ ಎಲಕ್ಷನ್ ಮರುಬಿಡು

IndiaGlitz [Tuesday, October 22, 2013]
Comments

ಈ ಹಿಂದೆ ಮತ್ತೆ ಬನ್ನಿ ಪ್ರೀತಿಸೋಣ ಚಿತ್ರಕ್ಕೆ ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಎಂದು ನಿರ್ಮಾಪಕ ರವೀಂದ್ರ ದಾಸ್ ಅಂಗಲಾಚಿ ಬೇಡಿದರು ಯಾರು ಬರಲಿಲ್ಲ. ಒಮ್ಮೆ ಚಿತ್ರಮಂದಿರದಲ್ಲಿ ರಕ್ಷಿಸಿಕೊಳ್ಳುವ ಚೈತನ್ಯ ಪಾಪ 3 ಕೋಟಿ ರೂಪಾಯಿ ಖರ್ಚು ಮಾಡಿ ಅವರಿಗೆ ಇರಲಿಲ್ಲ. ನಿಜಕ್ಕೂ ಒಳ್ಳೆಯ ಸಿನೆಮಾ ಮತ್ತೆ ಬನ್ನಿ ಪ್ರೀತಿಸೋಣ ಈಗ ಪುಟ್ಟ ಪರದೆಯ ಮೇಲೆ ಬಂದರೆ ಪ್ರೇಕ್ಷಕ ಇಷ್ಟ ಪಡುವನು. ಅದೇ ನಿಟ್ಟಿನಲ್ಲಿ ಈಗ ಮತ್ತೆ ಎಲಕ್ಷನ್ ತೋರಿಸಲು ಮುಂದಾಗಿದ್ದಾರೆ ಹೆಸರಾಂತ ನಿರ್ಮಾಪಕ ರಾಮು ಅವರು.

ಮೆಮೋರಿ ಅನ್ನು ಸ್ವಲ್ಪ ಹಿಂದೆ ತಿರುಗಿಸಿದರೆ ಗೋಚರ ಆಗೋದು 1960ರ ದಶಕದಲ್ಲಿ ಬಿಡುಗಡೆ ಆದ ಆಪರೇಷನ್ ಡೈಮಂಡ್ ರಾಕೆಟ್ ಅಣ್ಣಾವ್ರ ಸಿನೆಮಾ ಈ ವರ್ಷದಲ್ಲೇ ಮರುಬಿಡುಗಡೆ ಆಗಿ 100 ದಿವಸಗಳ ಪ್ರದರ್ಶನ ಭಾಗ್ಯ ಕಂಡಿತ್ತು. ಶಿವರಾಜಕುಮಾರ್ ಅವರ ಸಿನೆಮಾವಂತು ಅದೆಷ್ಟು ಸಾರಿ ಕಪಾಲಿ ಚಿತ್ರಮಂದಿರದ್ಲಲಿ ಬಿಡುಗಡೆ ಆಗಿದೆ ಎಂಬುದು ಚಿತ್ರಮಂದಿರದ ಮಾಲೀಕರಿಗೆ ಲೆಕ್ಕ ಇಲ್ಲವೇನೋ!

ಅದೇನೇ ಇರಲಿ ರಾಮು ಅವರು ಈ ಹಿಂದಿನ ರಾಜ್ಯ ವಿಧಾನ ಸಭಾ ಚುನಾವಣೆಗೆ ಮುಂಚೆ ಸಿನೆಮಾ ಬಿಡುಗಡೆ ಮಾಡಬೇಕೆಂದು ಇನ್ನಿಲ್ಲದಂತೆ ಪ್ರಯತ್ನ ಪಟ್ಟರೂ ಅದು ಆಗಲಿಲ್ಲ. ಈ ವರ್ಷದ ಆಗಸ್ಟ್ ಅಲ್ಲಿ ಎಲಕ್ಷನ್ ಬಿಡುಗಡೆ ಆಗಿತ್ತು. ಇದೆ ನವೆಂಬರ್ 1ರಂದು ಮರುಬಿಡುಗಡೆ ಭಾಗ್ಯ ಕಾಣುತ್ತಿದೆ.

ರಾಮು ಎಂಟೆರ್ಪೃಸೆಸ್ ಅವರ ಎಲೆಕ್ಷನ್ ನಿರೂಪಣೆ ಶೈಲಿಯಲ್ಲಿ ನ್ಯಾಯ ನೀತಿ ಧರ್ಮ ಪರಿಪಾಲನೆ ಎಲೆಕ್ಷನ್ ಕಮಿಷನರ್ ಅನುಷ್ಠಾನ ಗೊಳಿಸುವ ವಿಚಾರ.

ಖಡಕ್ ಅಧಿಕಾರಿ ಆಗಿ ಇಂದಿರಾ (ಮಾಲಾಶ್ರೀ) ಚಿತ್ರಕ್ಕಾಗಿ ಬಿರುಸಿನ ಸನ್ನಿವೇಶಗಳಲ್ಲಿ ಪಾಲ್ಗೊಂಡಿದ್ದಾರೆ. ನಿರ್ದೇಶಕ ಎನ್ ಓಂ ಪ್ರಕಾಷ್ ರಾವು ಅವರು ಅನೇಕ ಸಾಹಸಮಯ ಜನ ಮೆಚ್ಚುಗೆ ಗಳಿಸುವ ರೀತಿಯಲ್ಲಿ  ಛಾಯಾಗ್ರಾಹಕ ರಾಜೇಶ್ ಖಟ್ಟ ಅವರ ನೇತೃತ್ವದಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಆಕ್ಷನ್ ರಾಣಿ ಆಗಿ ಪ್ರಖ್ಯಾತರಾಗಿರುವ ಮಾಲಾಶ್ರೀ ಅವರು ಎಲೆಕ್ಷನ್ ಚಿತ್ರಕ್ಕೆ ಹೆಚ್ಚಿನ ಶ್ರಮದ ಜೊತೆಗೆ ಹಲವಾರು ಸಾಹಸದ ಹಾಗೂ ಸಮಂಜಸ ಎನ್ನುವ ಇಂಜೆಕ್ಷನ್ ಸಹ ನೀಡಿದ್ದಾರೆ.

ಸಾಹಸ ಚಿತ್ರಗಳ ಸರ್ದಾರ ಎಂದೇ ಖ್ಯಾತಿ ಪಡೆದಿರುವ ನಿರ್ದೇಶಕ ಓಂ ಪ್ರಕಾಷ್ ರಾವು ಅವರು ರಾಮು ಅವರ ಲಾಕ್ ಅಪ್ ಡೆತ್ ಸಿಂಹದ ಮರಿ ಏ ಕೆ ಕಲಾಸಿಪಾಳ್ಯ ಹಾಗೂ ಕನ್ನಡದ ಕಿರಣ್ ಬೇಡಿ ಸಿನೆಮಾಗಳನ್ನು ನಿರ್ದೇಶನ ಮಾಡಿದವರು. ಏಲೆಕ್ಷನ್ ಚಿತ್ರಕ್ಕೆ ರಾವು ಅವರೇ ಚಿತ್ರಕಥೆ ಬರೆದಿದ್ದಾರೆ.

ಕನ್ನಡ ಚಿತ್ರರಂಗದ ನಾದ ಬ್ರಹ್ಮ ಸಾಹಿತ್ಯದ ಸರದಾರ ರಾಷ್ಟ್ರ ಪ್ರಶಸ್ತಿ ವಿಜೇತ ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ಹಾಗೂ ಸಾಹಿತ್ಯವನ್ನು ಒದಗಿಸಿದ್ದಾರೆ. ರಾಜೇಶ್ ಖಟ್ಟ ಅವರ ಛಾಯಾಗ್ರಹಣ ಮನೋಹರ್ ಅವರ ಸಂಕಲನ ಆನಂದ್ ಅವರ ಸಂಭಾಷಣೆ ಸರಿಗಮ ವಿಜಿ ಹಾಗೂ ಸೋಮರಜ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಪೋಷಕ ಪತ್ರಗಳಲ್ಲಿ ಶ್ರೀನಿವಾಸಮೂರ್ತಿ ಲೋಕನಾಥ್ ಮೈಕೊ ನಾಗರಾಜ್ ಸುಚಿಂದ್ರಪ್ರಸಾದ್ ಶರತ್ ಲೋಹಿತಾಶ್ವ ಸಾಧು ಕೋಕಿಲ ಬುಲ್ಲೆಟ್ ಪ್ರಕಾಷ್ ಶೋಬಾರಾಜ್ ಪ್ರದೀಪ್ ರಾವತ್ ಹನುಮಂತೆ ಗೌಡ ಜಿ.ಕೆ.ಗೋವಿಂದ ರಾವು ಸುಚಿತ್ರಾ ದಿವ್ಯ ಶ್ರವಣ್ ಶಂಕೆರ್ಣರಾಯಣ್ ಕೀರ್ತಿರಾಜ್ ಮೈಕೊ ಶಿವು ರವಿ ವಿಕಾಸ್ ಹಾಗೂ ಇತರರು ಇದ್ದಾರೆ.




‘ಪಾತರಗಿತ್ತಿ’ ಕುಣಿಯಲು ಸಜ್ಜು



Other News


Brindavana 25 Darshan Grace

ಮತ್ತೆ ‘ಕೇಸ್ ನಂ 18/9’ ಬಿಡುಗಡೆ

Basavaraj K No More



Other News

 Four for friday!
 Neha in adventure role
 'Machi Deva' audio comes
 'Bajrangi Bhaijaan' and 'Baahubali' crush new releases
 Call me Drona - Bhagwan
 Song For '1944'
 It is 'Buguri' vs 'Uppi 2'
 'Ki And Ka': Kareena Kapoor's look unveiled
 Nithya Menon Sudeep heroine
 Dubbing set back



Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.