1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಗಂಗರಾಜು ಸವಾಲುಗಳು!

IndiaGlitz [Monday, October 28, 2013]
Comments

ಪ್ರತಿ ಬಾರಿ ಹೊಸ ಅಧ್ಯಕ್ಷರು ವಾಣಿಜ್ಯ ಮಂಡಳಿಗೆ ಆಯ್ಕೆ ಆದಾಗ ಎದುರಿಸುವ ಸವಾಲುಗಳು ಹಾಗೆಯೇ ಇರುತ್ತದೆ. ವಾಣಿಜ್ಯ ಮಂಡಳಿ ಕೆಲವು ಸಧ್ಯಸರು ಹಾಗೆ ಖಾಯಂ ಆಗಿ ಇರುವ ಹಾಗೆ ಕನ್ನಡ ಸಿನೆಮಾ ಉಧ್ಯಮ ಎದುರಿಸುವ ಪ್ರೋಬ್ಲೆಂಸ್ಗಳು!

ಎಚ್ ಡಿ ಗಂಗರಾಜು ಅವರು ಮತ್ತೊಮ್ಮೆ ವಿತರಕರ ವಲಯದಿಂದ ಆಯ್ಕೆ ಆಗಿರುವಾಗ ಅವರ ಹಿನ್ನಲೆಯನ್ನೇ ಗಮನಿಸಬೇಕಾಗುತ್ತದೆ. ಹೇಳಿ ಕೇಳಿ ಎಸ್ ಎಂ ಕೃಷ್ಣ ಕಟ್ಟಾ ಅನುಯಾಯಿ ಗಂಗರಾಜು ಅವರು ಕಾಂಗ್ರೆಸ್ಸ್ ಪಕ್ಷಕ್ಕೆ ಹತ್ತಿರ ಎಂದರು ಅವರು ಅತಿ ಹೆಚ್ಚು ವಿತರಣೆ ಮಾಡಿರುವುದು ತಮಿಳು ಹಾಗೂ ತೆಲುಗು ಸಿನೆಮಗಳು. ಇತ್ತೀಚಿಗೆ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಚಂದ್ರ ಸಿನೆಮಾಗಳ ವಿತರಣೆ ಮಾಡಿದರು. ಅದನ್ನು ಶಿಸ್ತು ಬದ್ದವಾಗಿಯೇ ಮಾಡಿದರು ಎಂಬುದು ಸಂತೋಷದ ವಿಚಾರ. ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿ ಇರುವುದರಿಂದ ಅವರಿಗೆ ಹಲವು ಒಳ್ಳೆಯ ನಿರ್ಧಾರಗಳಿಗೆ ಸರ್ಕಾರದ ಗಮನ ಸೆಳೆಯಬಹುದು. ಸ್ವತಃ ಗಂಗರಾಜು ಅವರು ಫಿಲ್ಮ್ ಸಿಟೀ ಯೋಜನೆ ಇದೆ. ಇನ್ನು ಹೆಸರುಘಟ್ಟದ 300 ಎಕರೆ ಪಾಡು ಕೇಳುವವರೇ ಇಲ್ಲ. ಅಲ್ಲಿ ಚಿತ್ರರಂಗದ ಹೌಸಿಂಗ್ ಕಾಂಪ್ಲೆಕ್ಸ್ ಆದರೂ ಡಾಕ್ಟರ್ ಅಂಬರೀಶ್ ಅವರು ವಸತಿ ಮಂತ್ರಿ ಆಗಿರುವುದರಿಂದ ಸಾಧ್ಯವೇ ಎಂದು ಮನಸಿನಲ್ಲಿ ಮನೆ ಮಾಡುತ್ತದೆ.

ಅದರೆ ಈಗ ಪರಭಾಷ ಹಾವಳಿ ಇಂದ ಕಾಂಪಿಟೀಷನ್ ಕಮಿಷನ್ ಎಂಬ ವಿಚಾರಗಳಿಂದ ಅವರು ಕನ್ನಡ ಸಿನೆಮಗಳನ್ನು ಪಾರು ಮಾಡಬೇಕಾಗಿದೆ. ಹಿಂದೆಲ್ಲ ಏಳು ವಾರಗಳ ನಂತರ ನಾಲ್ಕು ವಾರಗಳ ನಂತರ ಪರಭಾಷಾ ಚಿತ್ರಗಳು ಬಿಡುಗಡೆ ಆಗುವುದು ಎಂಬ ಒಡಂಬಡಿಕೆ ಮಾಡಿ ಕೊಂಡಿರುವುದು ಮರೆತುಹೋದ ವಿಚಾರ. ಬಹಳಷ್ಟು ಕನ್ನಡ ಸಿನೆಮಾಗಳು 100 ಪ್ರಿಂಟ್ ಹಾಕುವುದಿಲ್ಲ 150 ಸಿನೆಮಾ ಮಂದಿರಗಳಲ್ಲಿ ಬಿಡುಗಡೆ ಆಗುವುದಿಲ್ಲ ಆದರೆ ಪರಭಾಷಾ ಚಿತ್ರಗಳಿಗೆ ಅಂತಹ ಸೌಲಭ್ಯವಿದೆ - ಥ್ಯಾಂಕ್ಸ್ ಟು ಸಿ ಸಿ ಐ. ಆ ವಿಚಾರ ಇದುವರೆವಿಗೂ ಬಸಂತ್ಕುಮಾರ್ ಪಾಟೀಲ್ ಅವರ ಕೃಪೆಯಿಂದ ಕೋರ್ಟಿನಲ್ಲೇ ಇದೆ. ಇತ್ತ ನಮ್ಮ ರಾಜ್ಯದಲ್ಲೇ ನಾವು ಮುದುಡಿ ಕುಳಿತಿರುವಂತೆ ಆಗಿದೆ.

ಎಚ್ ಡಿ ಗಂಗರಾಜು ಅವರು ದಕ್ಷಿಣ ಭಾರತೀಯ ಚಲನಚಿತ್ರ ಮಂಡಳಿಯ ಮುಂದೆ ಈ ವ್ಯಾಜ್ಯವನ್ನು ಮುಂದೆ ಇಟ್ಟು ಮೊದಲು ಸಿ ಸಿ ಐ ಅಲ್ಲಿ ಕನ್ನಡ ಚಿತ್ರರಂಗ ಬಗ್ಗೆ ಇರುವ ಇಕ್ಕಟಿನ ಪರಿಸ್ಥಿಯನ್ನು ಹೋಗಲಾಡಿಸಲು ಸಾಧ್ಯಮಾಡಬೇಕು. ಆಗಲೇ ಅವರು ಪರಭಾಷಾ ವಿತರಕರು ಎಂಬ ಹಣೆ ಪಟ್ಟಿ ಇಂದ ಮುಕ್ತರಾಗುವುದು.

ಈ ಹಿಂದೆ ಗಂಗರಾಜು ಅವರು ಆಯ್ಕೆ ಆಗಿದ್ದಾಗ ಆಡಿದ ಮಾತು ಉಧ್ಯಮವನ್ನು ಒಗ್ಗಟ್ಟಿನಿಂದ ನಡೆಸಿಕೊಂಡು ಹೋಗುವುದು ಇಂದಿಗೂ ಆಡಿದ್ದಾರೆ. ಅಂದರೆ ಉಧ್ಯಮದಲ್ಲಿ ಸಂಕಷ್ಟ ಒಳಜಗಳ ಏನು ಸರಿ ಆಗಿಲ್ಲ ಎಂದು ಒಪ್ಪಿಕೊಂಡ ಹಾಗೆ ಆಯಿತು. ಉತ್ತರ ಕರ್ನಾಟಕದ ಮಂದಿಯು ವಾಣಿಜ್ಯ ಮಂಡಳಿಯ ಸಹವಾಸವೆ ಬೇಡ ಎಂದು ಕುಳಿತಿರುವಾಗ ಅವರನ್ನು ಅಪೇಕ್ಸ್ ಬಾಡಿ ತೆಕ್ಕೆಗೆ ತೆಗುದುಕೊಳ್ಳುವುದು ಸಾಧ್ಯವಾ

ಕನ್ನಡ ಸಿನೆಮಗಳು ರೀಮೇಕ್ ಮಾಡುವುದು ಜಾಸ್ತಿ ಎಂಬ ಹಣೆಪಟ್ಟಿಗೆ ಹೋಗಲಾಡಿಸುವ ಕ್ರಮಕ್ಕೆ ಅಧ್ಯಕ್ಷರಿಗೆ ಶಕ್ತಿ ಇಲ್ಲದಿದ್ದರರೂ ಡಬ್ಬಿಂಗ್ ವಿಚಾರವಾಗಿ ಬುಗಿಳಿದ್ದಿದೆ ಸಮಸ್ಯೆ. ಅದನ್ನು ಸಿ ಸಿ ಐ ಮುಖಾಂತರವೇ ನೋಡ್ಕೋತಿವಿ ಎಂದು ಹಲವಾರು ಹೇಳುತ್ತಿದ್ದಾರೆ. ಏನಿದರ ಅರ್ಥ ಅಂತ ನೋಡಬೇಕಿದೆ.

ವಾಣಿಜ್ಯ ಮಂಡಳಿ ವ್ಯಾಜ್ಯಗಳನ್ನೇ ಸರಿಪಡಿಸುವುದಕ್ಕೆ ಸಮಯ ವ್ಯಯ ಮಾಡಬೇಕಾದ ಪರಿಸ್ಥಿಯನ್ನು ಮೆಟ್ಟಿ ನಿಲ್ಲುವುದು ಹ್ಯಾಗೆ. ಮೊದಲು ನಮ್ಮವರು ಮುಟ್ಟಿದಕ್ಕೆ ಸಿಕ್ಕಿದಕ್ಕೆ ವ್ಯಾಜ್ಯ ಮಾಡಿಕೊಳ್ಳುವುದು ಮೊದಲು ಕೊನೆಗೊಳ್ಳಬೇಕು. ಚಿತ್ರಮಂದಿರಗಳು ಕೆಡವಿ ಮಲ್ಟಿಪ್ಲೆಕ್ಸ್ ಬರುತ್ತಿರುವ ಹಿನ್ನೆಲೆಯಲ್ಲೂ ಗಂಗರಾಜು ಕಮಿಟಿ ಮಹತ್ತರ ಪಾತ್ರ ವಹಿಸಬೇಕಿದೆ. ಆಂಗ್ಲ ಭಾಷೆಯ ಶೀರ್ಷಿಕೆ ಹಿಡಿದು ಬಂದವರನ್ನೆ ಇವರಿಗೇಕೆ ಬದಲಿಸಲು ಸಾಧ್ಯವಾಗುತಿಲ್ಲ ಎಂಬುದು ಪ್ರತಿಯೊಬ್ಬ ಕನ್ನಡಿಗ ಪ್ರಶ್ನೆಯೂ ಹೌದು.

ಹಿರಿಯರು ಕಿರಿಯರು ಸೇರಿ ಒಂದು ಥಿಂಕ್ ಟ್ಯಾಂಕ್ ಸಮಿತಿ ರಚಿಸಿ ಕನ್ನಡ ಚಿತ್ರ ರಂಗದ ಎಲ್ಲ ಉದ್ದಾರಗಳಿಗೆ ಬುದ್ದಿವಂತಿಕೆಯಿಂದ ಕೆಲಸ ಮಾಡುವುದು ಒಳ್ಳೆಯದು. ವರ್ಷದಿಂದ ವರ್ಷ ಉರುಳಿದರು ನೋಟಬಲ್ ಕೆಲಸಗಳು ಏನು ಆಗುತ್ತಿಲ್ಲ.

ಗಂಗರಾಜು ಜೊತೆ ಹೋರಾಟಗಾರ ಸಾ ರಾ ಗೋವಿಂದು ಇದ್ದಾರೆ ರಾಕ್ ಲೈನ್ ವೆಂಕಟೇಶ್ ಅಂತಹ ಅನುಭವಿ ಇದ್ದಾರೆ ಕೆಲವು ಉತ್ಸಾಹಿ ಯುವಕರು ಅವರ ಜೊತೆ ಇದ್ದಾರೆ. ಅವರೆಲ್ಲ ಪ್ರಯೋಜನ ಪಡೆದು ಕೊಂಡು ಒಳ್ಳೆಯ ನಿರ್ಧಾರಗಳಿಗೆಒಳ್ಳೆಯ ಕೆಲಸಗಳಿಗೆ ವಾಣಿಜ್ಯ ಮಂಡಳಿ ಸ್ಪಂದಿಸಲಿ.
Heblikar Hejje

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.