1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸ್ವೀಟಿ ಜೀವನ ಸೌಂದರ್ಯದ ಇಣುಕು

IndiaGlitz [Saturday, November 09, 2013]
Comments

ರಾಧಿಕಾ ಪಂಡಿತ್ ಅಭಿನಯದಲ್ಲಿ ಪಂಡಿತರೇನೋ ಅನ್ನುವಷ್ಟರ ಮಟ್ಟಿಗೆ ಚಾಲ್ತಿಯಲ್ಲಿ ಇರುವಾಗ ಹಳೆ ರಾಧಿಕಾ ಮತ್ತೆ ಆಗಮಿಸಿದ್ದಾರೆ. ಆರು ವರ್ಷಗಳ ಬಳಿಕ ಈ ಸುಂದರಿ ಮತ್ತೆ ಆಗಮಿಸಿ ಮೊದಲು ಮೆರದಿರುವುದು ಸೌಂದರ್ಯ ಪ್ರಜ್ಞೆ ಹಾಗೂ ಅದರ ಜೊತೆಗೆ ನಿರ್ಮಾಪಕಿಯಾಗಿ ಒಂದು ಸಿನೆಮಕ್ಕೆ ಏನೇನು ಬೇಕೋ ಅದೆಲ್ಲವನ್ನು ನೀಡಿ ಸ್ವೀಟಿ ಪ್ರತಿಯೊಂದು ಫ್ರೇಮ್ ಅಲ್ಲೂ ಹಿಂದಿ ತೆಲುಗು ತಮಿಳು ಚಿತ್ರಗಳ ಮಟ್ಟವನ್ನು ಕಾಪಾಡಿಕೊಳ್ಳುವಂತೆ ನೋಡಿಕೊಂಡಿದ್ದಾರೆ.

ಇದೊಂದು ಮಧರ್ಸ್ ಡೇ ಸಿನೆಮಾ ಎಂದು ನಾಯಕನ ದೃಷ್ಟಿಕೋನದಿಂದ ಹೇಳ ಬಹುದಾದರೂ ನಾಯಕಿಯ ದೃಷ್ಟಿಯಿಂದ ಇದು ಫಾಧರ್ಸ್ ಡೇ ಸಿನೆಮಾ ಅಂತಲೂ ಕರೆಯಬಹುದಾದರೂ ಚಿತ್ರದ ಅಂತ್ಯದಲ್ಲಿ ಸಮಾಜದಲ್ಲಿ ಎದುರಾಗಿರುವ ಭಾಂದವ್ಯದ ಸಮಸ್ಯೆಗೆ ವಿಜಯಲಕ್ಷ್ಮಿ ಸಿಂಗ್ ಅವರು ಒಂದು ಮುಲಾಮು ನೀಡಿದ್ದಾರೆ.

ಅತೀ ಹಚ್ಚಿಕೊಳ್ಳುವವರು ಮಗನ ವಿಚಾರದಲ್ಲಿ ಅಮ್ಮ ಹಾಗೂ ಮಡದಿ.ಮುತ್ತು ಕೊಟ್ಟೋಳು ಬಂದಾಗ ತುತ್ತು ಕೊಟ್ಟೋಳನ್ನು ಮರೆಯುವುದು ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತೆ ಈ ಜಾಗದಲ್ಲಿ ಕಾಣೋ ಹಾಡದ ತಾಯಿಯನ್ನೂ ಕಳಕೊಂಡ ಮೇಲೆ ಮತ್ತೆ ಸಿಗುವಳೇನೋ....ಎಂದು ಸಾರಿ ಸಾರಿ ಹೇಳಿದರು ಈ ಪ್ರಪಂಚದಲ್ಲಿ ಅಹಿತಕರ ಘಟನೆಗಳು ನಡೆಯುತ್ತಲೇ ಇರುತ್ತದೆ. ಅದೆಷ್ಟೋ ಓಲ್ಡ್ ಯೇಜ್ ಆಶ್ರಮಗಳು ಬೆಳೆಯುತ್ತಲೇ ಇವೆ.

ನಾಯಕ ಜೀವನದಲ್ಲಿ ಎಲ್ಲವನ್ನೂ ಕೊಟ್ಟ ತಾಯಿಯನ್ನೂ ಕುರಿತು ನಾನೊಬ್ಬ ಅಮ್ಮನ ಮಗ ಎನ್ನುತ್ತಾ ಪ್ರೀತಿಯನ್ನು ಸಹ ತ್ಯಾಗ ಮಾಡುವ ಕ್ಷಣ ಇದೆಯೆಲ್ಲ ಅದು ಚಿತ್ರದ ಒಂದು ತೀವ್ರವಾದ ಘಟ್ಟ. ನನ್ನ ಸೋಪು ಶಂಪು ಪೇಸ್ಟು ಶರ್ಟ್ ಏನು ಅಂತ ಅಮ್ಮನಿಗೆ ಗೊತ್ತಿದೆ. ನೀನು ಫೋನ್ ಅಪ್ಪ ಅಂದು ಬಿಡುವ ಕ್ಷಣ ಇದೆಯಲ್ಲ ಅದು ಹೆತ್ತ ತಾಯಿಗೆ ಅಮೋಘವದ ಋಣ ಸಂದಾಯ ಸಹ ಆಗುತ್ತದೆ.

ನನ್ನ ಸೆಲಕ್ಷನ್ ಅಮ್ಮನ ಅಪ್ಪ್ರೋವಲ್ ಎಂದ ಮಗ ಹಾಗೆಯೇ ನಡೆದು ಕೊಳ್ಳುವುದು ಸಿಂಗ್ ಅವರು ಕಿಂಗ್ ಎಂದು ಅನ್ನಿಸುತ್ತದೆ.

ಅದಕ್ಕೂ ಮುಂಚೆ ನಾಯಕಿ ರಾಧಿಕಾ ತನ್ನ ತಂದೆಗೆ (ಡಾಕ್ಟರ್ ಗಿರೀಷ್ ಕಾರ್ನಾಡ್)ಆದ ಅವಮಾನಕ್ಕಾಗಿ ಹಣವಂತರನ್ನು ಜೀವನದಿಂದ ದೂರ ಇಟ್ಟು ಅಪ್ಪ ನಿನ್ನ ಕಣ್ಣಲ್ಲಿ ಇನ್ನೆಂದೂ ನೀರು ಬರುವುದನ್ನು ನಾ ಬಿಡಲಾರೆ ಎನ್ನುವ ಕ್ಷಣ ತಕ್ಷಣ ಅಪ್ಪನ ದಿವಸದ ಆಚರಣೆಗೆ ಹೇಳಿ ಮಾಡಿಸಿದ ಸನ್ನಿವೇಶ ಅಲ್ಲವೇ ಎಂದು ಮನಸಿಗೆ ಬರುವುದುಂಟು.

ಒಂದು ಸಿನೆಮಾ ಈಗಿನ ಕಾಲದಲ್ಲಿ ಹೊಡಿ ಬಡಿ ಕಡಿ ಸೆಕ್ಸ್ ಡಬಲ್ ಮೀನಿಂಗ್ ಗಳಿಂದ ತುಂಬಿರುವಾಗ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರಿಗೆ ಇಂತ ಕೊನದಿಂದ ಯೋಚಿಸುವಶಕ್ತಿಗೆ ಅವರು ಬೆಳೆದ ಕುಟುಂಬವು ಕಾರಣವಾಗುವುದಿದೆ.

ಒಂದು ಚಿತ್ರ ಸಮೃದ್ದ ಆಗಬೇಕಾದರೆ ಇಂತಹ ಕೊನಗಳ ಜೊತೆಗೆ ಅದುನಿಕ ಜಗತ್ತಿಗೆ ಇಟ್ಟಿರುವ ಡೀಲ್ ಇದೆಯಲ್ಲ ಅದೇ ತಾಪತ್ರಯ ಇದ್ದ ಕಡೆಯಲ್ಲಿ ಅಳವಡಿಸ ಬಹುದಾದ ಒಂದು ಸಿನೆಮಾ ನೀಡುವ ಪರಿಹಾರ.
Raja Huli Success

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.